ಶೂ ಎಸೆದ ಘಟನೆ ತಪ್ಪಿತಸ್ಥ ವಕೀಲನಿಗೆ ಉಗ್ರ ಶಿಕ್ಷೆಗೆ ಆಗ್ರಹ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.08:
ಸುಪ್ರೀಂ ಕೋರ್ಟಿನ ಮುಖ್ಯ  ನ್ಯಾಯಾಧೀಶರಾದ  ಬಿ ಅರ್ ಗವಾಯಿ ಇವರಿಗೆ ಶೂ ಎಸೆಯಲಿಕ್ಕೆ ಪ್ರಯತ್ನಿಸಿದಂತ ವಕೀಲನ ಮೇಲೆ ಸ್ವಯಂ ಪ್ರೇರಿತವಾಗಿ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ಛಲವಾದಿ ಮಹಾಸಭಾ (ರಿ) ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದೆ.
ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ನಾಲಾಯಕ ಕಿಶೋರ್ ರಾಕೇಶ್ ಶೂ ಎಸೆತದಂಹ ಈ ಘಟನೆಯಿಂದ ಇಡೀ ಭಾರತ ದೇಶದ ನಾಗರಿಕರಿಗೆ ಎಸೆದಂತೆ ಆದ್ದರಿಂದ ಭಾರತೀಯರಾದ ನಾವುಗಳು ಇದನ್ನು ಪ್ರಬಲವಾಗಿ ವಿರೋಧಿಸಬೇಕಾಗಿದೆ ಭಾರತ ಸರ್ಕಾರ ತಕ್ಷಣವೇ ಆರೋಪಿ ವಕೀಲ ಕಿಶೋರ ರಾಕೇಶ ಇತನನ್ನು ದೇಶ ದ್ರೋಹಿ ಎಂದು ಘೋಷಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು  ಜೀವವಾದಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದೆ. ಮನವಿಪತ್ರ ಸಲ್ಲಿಸಿದ ಸಂದರ್ಭದಲ್ಲಿ  ಛಲವಾದಿ ಮಹಾಸಭಾ (ರಿ) ಬಳ್ಳಾರಿ ಜಿಲ್ಲಾ ಸಮಿತಿ ಅಧ್ಯಕ್ಷ ಸಿ ಶಿವಕುಮಾರ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಸಿ ಹನುಮೇಶ್ ಕಟ್ಟಿಮನಿ ,ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ, ಛಲವಾದಿ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಛಲವಾದಿ ಲೋಕೇಶ್ ಕಪಗಲ್, ಛಲವಾದಿ ಮಹಾಸಭಾ   ಜಿಲ್ಲಾ ಉಪಾಧ್ಯಕ್ಷರು  ಮಾನಯ್ಯ ಬಿ ಗೋನಾಳ,ಛಲವಾದಿ ಮುಖಂಡ ಮಲ್ಲಿಕಾರ್ಜುನ ಡಿ ಗೋನಾಳ, ರವಿ ಯುವ ಮುಖಂಡರು ಉಪಸ್ಥಿತರಿದ್ದರು.