Home ಸುದ್ದಿ ಅಂತರಾಷ್ಟ್ರೀಯ ಲೈಂಗಿಕ ಅಪರಾಧಿ ಜೆಫ್ರಿ ಜೊತೆ ಸಂಪರ್ಕವಿಲ್ಲ: ಟ್ರಂಪ್

ಲೈಂಗಿಕ ಅಪರಾಧಿ ಜೆಫ್ರಿ ಜೊತೆ ಸಂಪರ್ಕವಿಲ್ಲ: ಟ್ರಂಪ್

ವಾಷಿಂಗ್ಟನ್, ಫೆ.17:- ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಸಂಪರ್ಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದು ಸತ್ಯ ‘ಮರೆಮಾಡಲು ಏನೂ ಇಲ್ಲ’ ಎಂದು ಹೇಳಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದ ನಂತರ ದಿವಂಗತ ಹಣಕಾಸುದಾರ ಮತ್ತು ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರ ಸಂಪರ್ಕ ಹೊಂದಿದ್ದೇನೆ ಎಂದು ಮಾಡಲಾಗಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ, ಇದು ಆಧಾರ ರಹಿತ ಸಂಗತಿ ಎಂದಿದ್ಧಾರೆ


ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‍ಗೆ ಸಂಬಂಧಿಸಿದ ಮೂರು ಮಿಲಿಯನ್‍ಗಿಂತಲೂ ಹೆಚ್ಚು ಹೆಚ್ಚುವರಿ ಪುಟಗಳ ದಾಖಲೆಗಳನ್ನು ಅಮೆರಿಕದ ನ್ಯಾಯ ಇಲಾಖೆ ಬಹಿರಂಗಪಡಿಸಿದೆ. ಈ ನಡುವೆಯೇ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನಿಡಿದ್ಧಾರೆ
ಏರ್ ಫೆÇೀರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‍ನೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಮತ್ತು ಆತನನ್ನು ಯಾವತ್ತೂ ತಾವು ಸಂಪರ್ಕಿಸಿರಲಿಲ್ಲ. ಲೈಂಗಿಕ ವಿಷಯದ ಯಾವುದೇ ಪ್ರಕರಣದಲ್ಲಿ ತಮ್ಮನ್ನು ಅವರೊಂದಿಗೆತಳುಕು ಹಾಕುವುದರಲ್ಲಿ ಅರ್ಥವಿಲ್ಲ ಇದೊಂದು ಕಪೆÇೀಲಕಲ್ಪಿತ ಸುದ್ದಿ ಎಂದು ಹೇಳಿದ್ದಾರೆ
ಲೈಂಗಿಕ ಅಪರಾಧಿ ಜೆಫ್ರಿ ಎಸ್ಪೀನ್ ಜೊತೆಗೆ ಯಾವ ಸಂಬಂಧವೂ ಇರಲಿಲ್ಲ ಜೊತೆಗೆ ಸಂಪರ್ಕವೂ ಇಲ್ಲ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್ ಅವರು ಈ ವಿಷಯದಲ್ಲಿ “ನನಗೆ ಮರೆಮಾಡಲು ಏನೂ ಇಲ್ಲ. ನನ್ನನ್ನು ದೋಷಮುಕ್ತಗೊಳಿಸಲಾಗಿದೆ. ಜೆಫ್ರಿ ಎಪ್ಸ್ಟೀನ್‍ನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ… ಎಪ್ಸ್ಟೀನ್ ಬಗ್ಗೆ ನನ್ನನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಲಾಗಿದೆ ಎಂದಿದ್ದಾರೆ


ಅಮೇರಿಕಾದ ನ್ಯಾಯಾಂಗ ಇಲಾಖೆ ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ, ದಿವಂಗತ ಹಣಕಾಸುದಾರ ಮತ್ತು ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರ ಸಂಪರ್ಕಗಳ ಬಗ್ಗೆ ಹೊಸ ಗಮನ ಸೆಳೆಯಲಾಗಿದೆ. ಜೆಫ್ರಿ ಎಪ್ಸ್ಟೀನ್‍ಗೆ ಸಂಬಂಧಿಸಿದ ಮೂರು ಮಿಲಿಯನ್‍ಗಿಂತಲೂ ಹೆಚ್ಚು ಹೆಚ್ಚುವರಿ ಪುಟಗಳ ದಾಖಲೆಗಳನ್ನು ಇಲಾಖೆಯು ಸಾರ್ವಜನಿಕಗೊಳಿಸಿದೆ.
ಹೊಸದಾಗಿ ಬಹಿರಂಗಪಡಿಸಿದ ವಿಷಯವು ಸುಮಾರು 2,000 ವೀಡಿಯೊಗಳು ಮತ್ತು 180,000 ಚಿತ್ರಗಳನ್ನು ಒಳಗೊಂಡಿದೆ.
ಈ ಇತ್ತೀಚಿನ ಬಿಡುಗಡೆಯೊಂದಿಗೆ, ಅಧಿಕೃತವಾಗಿ ಪ್ರಕಟವಾದ ಪುಟಗಳ ಒಟ್ಟು ಸಂಖ್ಯೆ ಸುಮಾರು 3.5 ಮಿಲಿಯನ್ ತಲುಪಿದೆ.


ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಪ್ರಸಿದ್ಧ ರಾಜಕೀಯ ನಾಯಕರು ಮತ್ತು ವ್ಯವಹಾರ ವ್ಯಕ್ತಿಗಳೊಂದಿಗೆ ಝೆಪ್ರಿಎಪ್ಸ್ಟೀನ್‍ನ ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ, ಅಮೆರಿಕ ನ್ಯಾಯಾಂಗ ಇಲಾಖೆ ಜೆಫ್ರಿ ಎಪ್ಸ್ಟೀನ್-ಸಂಬಂಧಿತ ದಾಖಲೆಗಳ ಹೊಸ ದಾಖಲೆ ಬಿಡುಡಗೆ ಮಾಡಿದೆ.