
ಕೂಡ್ಲಿಗಿ. ಅ 05 :- ಮಂತ್ರಾಲಯ ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ 3ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟು ಆರು ಜನರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದ ಹೈವೇ 50ರ ರಸ್ತೆಯಲ್ಲಿ ಇಂದು ಮಧ್ಯಾಹ್ನ ಜರುಗಿದೆ.
ಮಂತ್ರಾಲಯ ಕಡೆಯಿಂದ ಹೈವೇ 50ರ ರಸ್ತೆ ಮೂಲಕ ಬೆಂಗಳೂರು ಕಡೆ ಹೋಗುವ ಎರಟಿಗ ಕರೊಂದರ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಣವಿಕಲ್ಲು ಸಮೀಪ ರಸ್ತೆ ವಿಭಜಕಕ್ಕೆ ದಿಕ್ಕಿಯಾಗಿದ್ದು ಅದರಲ್ಲಿದ್ದ 3ವರ್ಷದ ಬಾಲಕ ಮೃತಾಪಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು 6ಜನರಿಗೆ ಗಾಯಗಳಾಗಿದ್ದರಿಂದ ತಕ್ಷಣ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಎಂದು ತಿಳಿದಿದೆ ಮೃತ ಬಾಲಕ ಹಾಗೂ ಗಾಯಗೊಂಡವರ ಹೆಸರು ತಿಳಿದಿಲ್ಲವಾಗಿದೆ.