
ಮಂಗಳೂರು ನಗರ: ನಕಲಿ ಕ್ರೀಡಾ ಸಾಮಗ್ರಿಗಳ ಮಾರಾಟ ಜಾಲದ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದು, ಸುಮಾರು ೩೦೦ಕ್ಕೂ ಹೆಚ್ಚು ನಕಲಿ ವಾಲಿಬಾಲ್, ಫುಟ್ಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಃಡಿಚಿಟಿಜ Pಡಿoಣeಛಿಣoಡಿs Iಟಿಜiಚಿ Pvಣ. ಐಣಜ ನ ದಕ್ಷಿಣ ಭಾರತ ಪ್ರಾದೇಶಿಕ ಮುಖ್ಯಸ್ಥ ಸ್ಟೀಫನ್ ರಾಜ್ ನೀಡಿದ ದೂರಿನ ಮೇರೆಗೆ ಈ ದಾಳಿ ನಡೆಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿರುವ Sಠಿoಡಿಣs Wiಟಿಟಿeಡಿ ಅಂಗಡಿ ಮತ್ತು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿರುವ ಮಹಾದೇವ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ, ಅಔSಅಔ, ಓIಗಿIಂ ಮತ್ತು ಙಔಓಇಘಿ ಬ್ರ್ಯಾಂಡ್‌ಗಳ ನಕಲಿ ಕ್ರೀಡಾ ಸಾಮಗ್ರಿಗಳ ಮಾರಾಟ ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ದೂರಿನ ಅನ್ವಯ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೪೦/೨೦೨೫, ಕಲಂ: ೫೧(೧)(b), ೬೩, ಕೃತಿಸ್ವಾಮ್ಯ ಕಾಯ್ದೆ ೧೯೫೭ ಹಾಗೂ ಮಂಗಳೂರು ಉತ್ತರ ಠಾಣೆಯಲ್ಲಿ ಅ.ಕ್ರ. ೯೫/೨೦೨೫, ಕಲಂ: ೫೧(೧)(b), ೬೩, ಕೃತಿಸ್ವಾಮ್ಯ ಕಾಯ್ದೆ ೧೯೫೭ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅದರಂತೆ, ದಿನಾಂಕ ೧೮-೦೮-೨೦೨೫ ರಂದು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮತ್ತು ದಿನಾಂಕ ೧೯-೦೮-೨೦೨೫ ರಂದು ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಸುಮಾರು ೩೦೦ಕ್ಕೂ ಹೆಚ್ಚು ನಕಲಿ ವಾಲಿಬಾಲ್‌ಗಳು, ಫುಟ್‌ಬಾಲ್‌ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ.