
ಹೆರಾತ್, ಆ.20:- ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‍ನಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ. ಟ್ರಕ್ ಮತ್ತು ಮೋಟಾರ್‍ಸೈಕಲ್‍ಗೆ ಡಿಕ್ಕಿ ಹೊಡೆದ ನಂತರ ಪ್ರಯಾಣಿಕರ ಬಸ್ ಬೆಂಕಿಗೆ ಆಹುತಿಯಾಗಿ ಈ ಅಪಘಾತ ಸಂಭವಿಸಿದೆ.
ಪ್ರಾಂತೀಯ ಸರ್ಕಾರದ ವಕ್ತಾರ ಅಹ್ಮದುಲ್ಲಾ ಮುತ್ತಕಿ ಟ್ವಿಟರ್‍ನಲ್ಲಿ ಘಟನೆಯನ್ನು ದೃಢಪಡಿಸಿದ್ದಾರೆ, ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ರಸ್ತೆ ಅಪಘಾತ ಇದಾಗಿದೆ ಎಂದು ಬಣ್ಣಿಸಿದ್ದಾರೆ. ಹೆರಾತ್‍ನಲ್ಲಿ ಬಸ್ ಟ್ರಕ್ ಮತ್ತು ಮೋಟಾರ್‍ಸೈಕಲ್‍ಗೆ ಡಿಕ್ಕಿ ಹೊಡೆದ ಪರಿಣಾಮ 71 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ಬಸ್ ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಮತ್ತು ಜನರು ಭಯಭೀತರಾಗಿ ನಿಂತಿರುವುದನ್ನು ತೋರಿಸುತ್ತವೆ. ಇರಾನ್‍ನಿಂದ ಗಡೀಪಾರು ಮಾಡಲಾದ ಅಫ್ಘಾನ್ ನಾಗರಿಕರನ್ನು ಬಸ್ ಹೊತ್ತೊಯ್ಯುತ್ತಿತ್ತು, ಅವರು ಇಸ್ಲಾಂ ಖಲಾ ಗಡಿಯನ್ನು ದಾಟಿ ಕಾಬೂಲ್‍ಗೆ ಹೋಗುತ್ತಿದ್ದರು ಎಂದು ಪ್ರಾಂತೀಯ ಅಧಿಕಾರಿ ಮೊಹಮ್ಮದ್ ಯೂಸುಫ್ ಸಯೀದಿ ತಿಳಿಸಿದ್ದಾರೆ. ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಸ್ಲಾಂ ಖಲಾದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ವಲಸಿಗರು ಎಂದು ಸಯೀದಿ ಮಾಹಿತಿ ನೀಡಿದ್ದಾರೆ.
ಹೆರಾತ್ ನಗರದ ಹೊರಗಿನ ಗುಜಾರಾ ಜಿಲ್ಲೆಯಲ್ಲಿ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಹ್ಮದುಲ್ಲಾ ಮುತ್ತಕಿ ಹೇಳಿದ್ದಾರೆ. ಬಸ್ ಮೊದಲು ಮೋಟಾರ್ ಸೈಕಲ್‍ಗೆ ಡಿಕ್ಕಿ ಹೊಡೆದು ನಂತರ ಇಂಧನ ತುಂಬಿದ ಟ್ರಕ್‍ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಸ್ಲಾಂ ಖಲಾ ಗಡಿಯಿಂದ ಪ್ರಯಾಣ ಆರಂಭಿಸಿದ್ದ ವಲಸಿಗರೆಂದು ಪೆÇಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮೂವರು ಪ್ರಯಾಣಿಕರು ಬದುಕುಳಿದರು, ಆದರೆ ಟ್ರಕ್ ಮತ್ತು ಮೋಟಾರ್‍ಸೈಕಲ್‍ನಲ್ಲಿದ್ದ ನಾಲ್ವರು ಸಹ ಸತ್ತವರಲ್ಲಿ ಸೇರಿದ್ದಾರೆ. ಅಪಘಾತದ ನಂತರ ರಸ್ತೆಯಲ್ಲಿ ಉರಿಯುತ್ತಿರುವ ಬಸ್ ಮತ್ತು ಇತರ ಎರಡು ವಾಹನಗಳ ಶಿಥಿಲಗೊಂಡ ಅವಶೇಷಗಳು ಕಂಡು ಬಂದಿದೆ.