Home ಜಿಲ್ಲೆ ಭಾರತೀಯ ಲಲಿತ ಕಲೆಗಳ.. ಉಳಿಸುವ ಕೆಲಸ ನಮ್ಮೆಲ್ಲರದು

ಭಾರತೀಯ ಲಲಿತ ಕಲೆಗಳ.. ಉಳಿಸುವ ಕೆಲಸ ನಮ್ಮೆಲ್ಲರದು

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.21.. ಭಾರತೀಯ ಲಲಿತ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದು ಸಂಡೂರು ಸರಕಾರಿ ಪದವಿ ಕಾಲೇಜಿನ ಅಧ್ಯಾಪಕರು ಡಾ.ಅಪ್ಪಕಾಯ ಮಹೇಶ ಶರ್ಮ ಎಂದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ರಾಘವೇಂದ್ರ ಮಠದ ಸಭಾಮಂಟಪದಲ್ಲಿ ಹಮ್ಮಿಕೊಂಡ ವೈಶಾಕ ಮಾಸ ಸಾಂಸ್ಕೃತಿಕ ಸಂಭ್ರಮ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮದ ಜೊತೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡಿಸಲು ಪ್ರೊತ್ಸಾಹ ನೀಡಬೇಕೆಂದರು. ಬಿಪಿಎಸ್ಸಿ ಶಾಲೆಯ ಪ್ರಾಂಶುಪಾಲರು ಅನಿಲ್ ಕುಮಾರ್ ಅವರು ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಇಂತಹ ಅಪರೂಪದ ಕಲಾ ಪ್ರದರ್ಶನಗಳು ನಡಿಸಿತ್ತಿರುವುದು ಅಭಿನಂದನೀಯ ಎಂದರು . ಟ್ರಸ್ಟ್ ವತಿಯಿಂದ ವಿವಿಧ ರಂಗಗಳಲ್ಲಿ ಸೇವೇ ಸಲ್ಲಿಸಿದ ಸಾಧಕರು ವೈದ್ಯರಾದ ಶ್ರೀಧರಮೂರ್ತಿ, ಎಸ್.ಕ.ಅಜಯ್, ಬಿ. ಕೆ. ಶ್ರೀಕಾಂತ್ , ಎಸ್.ಕೆ. ಪ್ರಣೀತ ಅಜಯ್ ಗೆ ತುಂಗಾ ವೈದ್ಯ ರತ್ನ ಪ್ರಶಸ್ತಿ, ಡಾ.ಶ್ರೀನಾಥ್, ಹನುಮಂತ ಆಚಾರ್ ಗೆ ತುಂಗಾ ಸಮಾಜ ಸೇವಾ ರತ್ನ, ಡಾ. ಮಹೇಶ್ ಶರ್ಮ, ಅನಿಲ್ ಕುಮಾರ್ ಗೆ ತುಂಗಾ ಶಿಕ್ಷಣ ರತ್ನ, ಪ್ರಸನ್ನ ಆಚಾರ್ ಗೆ ತುಂಗಾ ಕಲಾ ಪೋಷಕ ರತ್ನ, ಶ್ರೀಜಾ ಗೆ ತುಂಗಾ ರಂಗ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಶ್ರೀಜಾ ತಂಡದ ಶ್ರೀನಿವಾಸ ಕಲ್ಯಾಣ ಭಕ್ತಿ ಪ್ರದಾನ ನಾಟಕ ಭಕ್ತರನ್ನು ರೇಂಜಿಸಿತು. ಕಾರ್ಯಕ್ರಮದಲ್ಲಿ   ಕಿಸ್ಕಿಂದ ವಿಶ್ವವಿದ್ಯಾಲಯದ ಕುಲಸಚಿವರು ಡಾ. ರಾಜು ಜಡರ್, ಕಣೆಕಲ್ ಶ್ರೀಧರ್, ವಿಠ್ಠಲ ದೇಸಾಯಿ, ವಿಜಯ ವಿಠ್ಠಲ, ರಾಮರಾವ್ ಕುಲಕರ್ಣಿ, ಸಿಮೆಂಟ್ ಗಿರಿ, ಅಶೋಕ್ ಕುಲಕರ್ಣಿ, ವೀರೇಶ್, ಅಮೃತ, ದೀಕ್ಷಾ, ಸಿಂಧು, ಪ್ರೀತಿ, ರಾದಾಕೃಷ್ಣ, ತನ್ಮಯಿ, ವಿದ್ಯಾ, ಪರಿಮಳ, ಬಾಂದವಿ , ಶೈನು, ಸೋನು, ಮುಂತಾದವರು ಇದ್ದರು. ಟಿ.ನಾಗಭೂಷಣ್ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿ. ರಾಮಚಂದ್ರ ವಂದಿಸಿದರು.