
ನಗರದ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಇರುವ ಎಲ್‌ಪಿಜಿ ಗ್ಯಾಸ್ ಬಂಕ್‌ನಲ್ಲಿ ಗ್ಯಾಸ್ ಖಾಲಿಯಾಗಿದ್ದು, ಬಂಕ್ ಮುಂಭಾಗ ಟೇಪ್ ಹಾಕಿರುವುದು.
ಬೆಂಗಳೂರು, ಮಾ. -೧೧ ಗಾಲ್ಫ್ ರಾಷ್ಟ್ರಗಳಲ್ಲಿ ಯುದ್ಧ ಭೀತಿ: ಬೆಂಗಳೂರಿನಲ್ಲಿ ಐPಉ ಗ್ಯಾಸ್ ಬಂಕ್ ಗಳು ಬಂದ್. ದೇವಾಲಯದ ಪ್ರಸಾದದ ಮೇಲುಪರಿಣಾಮ..
ಮಧ್ಯಪ್ರಾಚ್ಯದ ಗಾಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲೂ ಆಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ನಗರದ ಹಲವು ಆಟೋ ಗ್ಯಾಸ್ ಬಂಕ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದರ ಪರಿಣಾಮವಾಗಿ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ತೊಂದರೆ ಉಂಟಾಗಿದೆ. ಜೊತೆಗೆ ದೇವಾಲಯಗಳಲ್ಲಿ ನೀಡುವ ಪ್ರಸಾದಕ್ಕೂ ಗ್ಯಾಸ್ ಕೊರತೆ ತಟ್ಟಿದೆ.
ನಗರದ ಕೆಲ ಆಟೋ ಗ್ಯಾಸ್ ಬಂಕ್‌ಗಳಿಗೆ ನಿನ್ನೆದಿಂದ ಸರಿಯಾಗಿ ಗ್ಯಾಸ್ ಪೂರೈಕೆ ಆಗದ ಹಿನ್ನೆಲೆ ಅವುಗಳನ್ನು ಮುಚ್ಚಲಾಗಿದೆ. ಶೇಷಾದ್ರಿಪುರಂ- ಗುಟ್ಟಹಳ್ಳಿ ಬಳಿಯಿರುವ ಟ್ರೂ ಗ್ಯಾಸ್ ಬಂಕ್ ಕೂಡ ಸ್ಟಾಕ್ ಕೊರತೆಯಿಂದ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಆಟೋ ಗ್ಯಾಸ್ ದರವೂ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಲೀಟರ್‌ಗೆ ಸುಮಾರು ೬೫ ರೂಪಾಯಿ ಇದ್ದ ದರ ಇಂದು ೮೦ ರೂಪಾಯಿಗೆ ಏರಿಕೆಯಾಗಿದೆ.
ಇದರಿಂದ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಹೆಚ್ಚುವರಿ ಹೊರೆ ಬಿದ್ದಿದೆ.
ಈ ಬಗ್ಗೆ ಗ್ಯಾಸ್ ಬಂಕ್ ಮ್ಯಾನೇಜರ್ ಬಾಬು ಮಾತನಾಡಿ, “ಐPಉ ಆಟೋ ಗ್ಯಾಸ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈಗ ಬರುತ್ತಿರುವ ಗ್ಯಾಸ್ ಬೆಲೆ ಹೆಚ್ಚಾಗಿದೆ. ನಮಗೆ ಹೆಚ್ಚಿದ ದರಕ್ಕೆ ಸಿಗುವಾಗ ಹಳೆಯ ದರದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಸದ್ಯ ಸ್ಟಾಕ್ ಕಡಿಮೆ ಇರುವುದರಿಂದ ಬಂಕ್ ಬಂದ್ ಮಾಡಿದ್ದೇವೆ. ಹೊಸ ಸ್ಟಾಕ್ ಬಂದ ತಕ್ಷಣ ಮತ್ತೆ ಬಂಕ್ ತೆರೆಯುತ್ತೇವೆ,” ಎಂದು ತಿಳಿಸಿದ್ದಾರೆ.
ದೇವಾಲಯಗಳಿಗೂ ಗ್ಯಾಸ್ ಕೊರತೆ ತಟ್ಟಿದೆ..
ನಗರದ ಬನಶಂಕರಿ ದೇವಾಲಯದಲ್ಲಿ ಸದ್ಯ ಕೇವಲ ನಾಲ್ಕು ಗ್ಯಾಸ್ ಸಿಲಿಂಡರ್ ಮಾತ್ರ ಉಳಿದಿವೆ. ಇಲ್ಲಿ ಪ್ರತಿದಿನ ಬೆಳಗ್ಗೆ ಪ್ರಸಾದ, ಮಧ್ಯಾಹ್ನ ಅನ್ನಪ್ರಸಾದ ಹಾಗೂ ಸಂಜೆ ಪ್ರಸಾದ ನೀಡಲಾಗುತ್ತದೆ.
ಪ್ರತಿದಿನ ಸುಮಾರು ೪ ರಿಂದ ೫ ಗ್ಯಾಸ್ ಸಿಲಿಂಡರ್ ಅಗತ್ಯವಿದ್ದು, ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾಸೋಹ ನೀಡಲಾಗುತ್ತದೆ. ವಿಶೇಷವಾಗಿ ಮಂಗಳವಾರ ಹಾಗೂ ಶುಕ್ರವಾರ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಈ ಕುರಿತು ಅನ್ನದಾಸೋಹ ವ್ಯವಸ್ಥಾಪಕ ದೇವರಾಜು ಮಾತನಾಡಿ, “ಗ್ಯಾಸ್ ಕೊರತೆ ಇದ್ದರೂ ಯಾವುದೇ ಕಾರಣಕ್ಕೂ ಪ್ರಸಾದ ವಿತರಣೆ ನಿಲ್ಲಿಸುವುದಿಲ್ಲ. ಭಕ್ತರಿಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀಡಬಹುದು, ಆದರೆ ಅನ್ನದಾಸೋಹವನ್ನು ಮುಂದುವರಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಗಾಲ್ಫ್ ರಾಷ್ಟ್ರಗಳ ಯುದ್ಧ ಭೀತಿ ಪರಿಣಾಮವಾಗಿ ಬೆಂಗಳೂರಿನಲ್ಲೂ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಸಾರಿಗೆ ಕ್ಷೇತ್ರದಿಂದ ಹಿಡಿದು ದೇವಾಲಯಗಳ ಅನ್ನದಾಸೋಹವರೆಗೂ ಪರಿಣಾಮ ಕಾಣಿಸಿಕೊಳ್ಳುತ್ತಿದೆ.




























