
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.15: ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಎಂ. ರಮಾಕಾಂತ್ ಎನ್ನುವ ವ್ಯಕ್ತಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಬಗ್ಗೆ ಮತ್ತು ಅಕ್ಕಮಹಾದೇವಿ ಬಗ್ಗೆ ಅತ್ಯಂತ ಅಶ್ಲೀಲವಾಗಿ ಹೀಯಾಳಿಸಿ, ಚರಿತ್ರೆಗೆ ದ್ರೋಹ ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿರಿಗೇರಿ ಪನ್ನಾರಾಜ್ ಹಾಗೂ ಬಳ್ಳಾರಿಯ ಬಸವಭಕ್ತರು ಸೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಬಳ್ಳಾರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ. ಶ್ರೀನಿವಾಸ್ ಇವರಿಗೆ ಸಲ್ಲಿಸಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಈ ಸಮಯದಲ್ಲಿ ಎಸ್. ಪನ್ನರಾಜ್ ಜೊತೆ ಸಂಗನಕಲ್ ವಿಜಯ್ ಕುಮಾರ್, ರವಿಕುಮಾರ್,ಎಚ್. ಕೆ, ಮಲ್ಲಿಕಾರ್ಜುನ, ಚಂದ್ರಶೇಖರ ಆಚಾರಿ, ಕಲಾವತಿ, ದುರ್ಗಣ್ಣ, ಕಟ್ಟೆಗೌಡ; ಪಾಲಾಕ್ಷಗೌಡ, ಚಂದ್ರಶೇಖರಯ್ಯ ಸ್ವಾಮಿ, ಹಾಗೂ ಇತರರು ಇದ್ದರು.



























