
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಆಂದ್ರ ಪ್ರದೇಶದ ಪೊಲೀಸರು ನಗರದ ಕೌಲ್ ಬಜಾರ್ ಪ್ರದೇಶದ. ಅಬ್ದುಲ್ ಕಲಾಂ ಬೀದಿಯ ವಾಸಿಯಾಗಿದ್ದ ಅಬ್ದುಲ್ ಸಲಾಂ (36) ಎಂಬ ಯುವಕನನ್ನು. ಅಲ್ಲಿಪುರದ ದಾರದ ಮಿಲ್ ಬಳಿ ಉಗ್ರವಾದದ ಸಿದ್ದಾಂತ ಪ್ರಚಾರ ಮಾಡುತ್ತಿದ್ದನೆಂದು ಬಂಧಿಸಿ ಮೊನ್ನೆ ಕರೆದೊಯ್ದಿದ್ದಾರೆ.
ಬಂಧಿತ ಯುವಕ ಆನ್ ಲೈನ್ ನಲ್ಲಿ ಮೂಲಭೂತವಾದದ ಪ್ರಚಾರ, ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಇದೆ. ವಿದೇಶಿ ಉಗ್ರ ಅಲ್ ಹಕೀಮ್ ಶುಕೂರ್ ನೊಂದಿಗೆ ಈತ ಸಂಪರ್ಕ ಹೊಂದಿ. ಈತ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಉಗ್ರವಾದದ ಬಗ್ಗೆ ತಿಳಿಸುತ್ತಿದ್ದನಂತೆ. ಜಿಹಾದ್ ಪರಿಕಲ್ಪನೆಗಳನ್ನು ಪ್ರಚಾರ ಮಾಡುವ ಗುಂಪಿನ ಸದಸ್ಯನಾಗಿದ್ದನಂತೆ.


























