
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.16: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಬಿಸಿಲಿನ ಬೇಗೆಯನ್ನು ಅನುಭವಿಸುತ್ತಿರುವ ಪ್ರಾಣಿ ಪಕ್ಷಿಗಳ ನೆರವಿಗಾಗಿ “ನಮ್ಮ ಸಹಜೀವಿಗಳು” ಯೋಜನೆ ರೂಪಿಸಿಕೊಂಡು., ಕಾಳು ನೀರಿನ ಬಟ್ಟಲು ಮತ್ತು ತೊಟ್ಟಿಗಳನ್ನು ಆಸಕ್ತ ಸಾರ್ವಜನಿಕರಿಗೆ ನಿನಾ ಕಚೇರಿ ಬಳ್ಳಾರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನಯಕುಮಾರ್ ಮಾತಾಡಿ, ಬಿಸಿಲಿನ ತಾಪಕ್ಕೆ ಮೂಕ ಜೀವಿಗಳಿಗೆ ತೊಂದರೆಯಾಗುತ್ತಿದ್ದು., ನಮ್ಮ ಸಹಜೀವಿಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ತಿಳಿಸಿದರು. ಇಂಜಿನಿಯರ್ ಶ್ರೀಧರ್ ಮಾತಾಡಿ, ಸಂಸ್ಥೆಯ ನಮ್ಮ ಸಹಜೀವಿಗಳು ಕಾರ್ಯಕ್ರಮ ಎಲ್ಲರಿಗೂ ಮಾದರಿ ಎಂದು ತಿಳಿಸಿದರು ಯೋಜನೆಯ ಕಾರ್ಯದರ್ಶಿ ಅಜಯ್ ರವರು ಮಾತಾಡಿ ಈ ಬಟ್ಟಲು ಮತ್ತು ತೊಟ್ಟಿಗಳ ಉಚಿತ ವಿತರಣೆಯು ಮಾರ್ಚ್ ತಿಂಗಳು ಪೂರ್ತಿ ನಡೆಯಲಿದ್ದು., ಆಸಕ್ತರು ಸಂಸ್ಥೆಯ ಮೊಬೈಲ್ ಸಂಖ್ಯೆ 9448584400 ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಕುಮಾರಿ ಶಾಂತ, ಶ್ರೀಮತಿ ಶಮಸ್ಸದ್ ಖಾನುಂ, ಶ್ರೀಮತಿ ನಸೀಮಾ, ಮೆಹಬೂಬ್ ಭಾಷ, ದಕ್ಷಿಣ ಮೂರ್ತಿ, ವೀರೇಶ್, ಮನೋಜ್, ಶ್ರೀಧರ್, ಪ್ರದೀಪ್ ರೆಡ್ಡಿ, ಶ್ರೀನಿವಾಸ, ಶರಣ್,ಬಾಲಾಜಿ, ಶರಣ್,ಮಹಮ್ಮದ್, ಬಾಲು, ಆನಂದ್ ಯೋಗಿ, ಅನಿಲ್ , ಹಸೇನ್, ವೆಂಕಟೇಶ್, ಭರತ್, ಹರ್ಷವರ್ಧನ್,ಮಾರುತಿ,ಇತರರು ಉಪಸ್ಥಿತರಿದ್ದರು.



























