Home ಸುದ್ದಿ ರಾಷ್ಟ್ರೀಯ ಪಬ್ಜಿ ಆಡುವಾಗ- ಯುವಕ ಸಾವು

ಪಬ್ಜಿ ಆಡುವಾಗ- ಯುವಕ ಸಾವು

ಲಖನೌ,ಫೆ.9:- ಗಾಜಿಯಾಬಾದ್‍ನ ಮೂವರು ಸಹೋದರಿಯರು ಕೊರಿಯನ್ ವೆಲ್ ಗೇಮ್‍ಕ್ಕೆ ಬಲಿಯಾದ ಘಟನೆ ಮರೆಯುವ ಮೊದಲೇ, ಮತ್ತೊಂದು ದುರದೃಷ್ಟಕರ ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಮೀರತ್‍ನಲ್ಲಿ ಪಬ್ಜಿ ಆಡುವಾಗ ಅಧಿಕ ರಕ್ತದೊತ್ತಡದಿಂದ ಯುವಕ ಸಾವನ್ನಪ್ಪಿದ್ದಾನೆ.


ಮೃತ ಯುವಕ ಮೊಹಮ್ಮದ್ ಕೈಫ್ (22), ಖೈರ್‍ನಗರದ ಗುಲಾರ್ ವಾಲಿ ಗಾಲಿಯ ನಿವಾಸಿ ಆಸ್ತಿ ವ್ಯಾಪಾರಿ ಫಾರೂಕ್ ಅವರ ಏಕೈಕ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‍ಲೈನ್ ಗೇಮಿಂಗ್‍ಗೆ ವ್ಯಸನಿಯಾಗಿದ್ದ. ಶುಕ್ರವಾರ ರಾತ್ರಿ ತಡರಾತ್ರಿಯವರೆಗೆ ಅವರು ಪಬ್ಜಿ ಆಡುತ್ತಿದ್ದ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಬ್ಜಿ ಆಡುವಾಗ ಕೈಫ್ ಕುಸಿದು ಬಿದ್ದ ಶಬ್ದ ಕೇಳಿ ಅವರ ಕುಟುಂಬ ಸದಸ್ಯರು ಕೋಣೆಗೆ ಧಾವಿಸಿದ್ದಾರೆ ಆ ವೇಳೆ ಕೈಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು


ಕೈಫ್ ಅವರ ಪೆÇೀಷಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ .ಪರೀಕ್ಷೆಯ ಸಮಯದಲ್ಲಿ, ಅವರ ರಕ್ತದೊತ್ತಡ 300 ದಾಟಿದೆ ಎಂದು ಕಂಡುಬಂದಿದೆ.
ಅವರನ್ನು ತಕ್ಷಣ ದೆಹಲಿ ಆಸ್ಪತ್ರೆಗೆ ಕಳುಹಿಸಲಾಗಿದೆ, ಅಲ್ಲಿ ಅವರು 2 ದಿನಗಳ ಚಿಕಿತ್ಸೆ ಪಡೆದಿದ್ದಾರೆ. ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಇದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಿ ಯುವಕನ ಸಾವಿಗೆ ಇದೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.