
ಕೆಆರ್ ಪುರ,ಫೆ.8:- ನಮ್ಮ ದೇಶ ಉಳಿಯಬೇಕೆಂದರೆ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಒಗ್ಗೂಡುವ ಜೊತೆಗೆ ಇಂತಹ ಸಮಾಜೋತ್ಸವಗಳು ದೇಶದೆಲ್ಲೆಡೆ ನಡೆಯಬೇಕೆಂದು ಎಂದು ನೆಲಮಂಗಲದ ಶಿವಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ರಮಾಣನಂದ ಸ್ವಾಮೀಜಿ ಅವರು ತಿಳಿಸಿದರು.
ವಿಜಿನಾಪುರ ವಾರ್ಡ್ ಕೆಂಪೇಗೌಡ ಪ್ರತಿಮೆ ಬಳಿ ಪ್ರದೀಪ್ ಗೌಡ ಹಾಗೂ ಸ್ಥಳೀಯ ಮುಖಂಡರು ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಅವರು ಮಾತನಾಡಿದರು.
ಒಳಪಂಗಡಗಳ ಜಾತಿ ವ್ಯವಸ್ಥೆಯಿಂದ ಧರ್ಮಕ್ಕೆ ಕುತ್ತು ಬಂದೊದಗುವ ಮೊದಲು ನಾವೆಲ್ಲರೂ ಹಿಂದೂ , ಒಂದು ಎಂಬ ಭಾವನೆ ಸಮಾಜದಲ್ಲಿ ಬರಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೇಸರಿ ಶಾಲು ಹಾಕಿಕೊಂಡು, ಬಾವುಟ ಹಿಡಿದು, ತಿಲಕ ಇಟ್ಟುಕೊಂಡರೆ ಧರ್ಮ ಉಳಿಯದು. ಧರ್ಮದ ಆಶಯಗಳನ್ನು ಅರ್ಥ ಮಾಡಿಕೊಂಡು ಪಾಲಿಸಬೇಕು’ ಎಂದರು.
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ದೇಶಾಭಿಮಾನ ಹೊಂದಿರಬೇಕು. ಶಾಲೆಯಲ್ಲಿ ಮಕ್ಕಳಿಗೂ ದೇಶ ಮತ್ತು ಭಾಷೆಯ ವಿಶೇಷತೆ ಬಗ್ಗೆ ಶಿಕ್ಷಣ ನೀಡಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಕೈಜೋಡಿಸಿದಾಗ ಮಾತ್ರ ಶಕ್ತಿಶಾಲಿ ರಾಷ್ಟ್ರವಾಗಲು ಸಾಧ್ಯ.
ಮಕ್ಕಳಿಗೆ ಕಲಿಕೆಯ ಹಂತದಲ್ಲಿ ಧರ್ಮ, ದೇವಾಲಯಗಳ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಬೆಳೆಸಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು. ಭಾರತ ಜಗತ್ತಿನ ಕಲ್ಯಾಣ ಬಯಸುವ ದೇಶವಾಗಿದೆ ಎಂದು ತಿಳಿಸಿದರು
ಪ್ರದೀಪ್ ಗೌಡ ಅವರು ಮಾತನಾಡಿ, ಆರ್‍ಎಸ್‍ಎಸ್‍ಗೆ 100 ವರ್ಷ ತುಂಬಿದೆ. ಸಂಘದ ಆರಂಭದ ಉದ್ದೇಶ, ನಡೆದು ಬಂದ ಹಾದಿ ಸ್ಮರಿಸಬೇಕು. ಭವಿಷ್ಯದ ಸವಾಲು, ಆಕಾಂಕ್ಷೆ ನೆನಪು ಮಾಡಿಕೊಳ್ಳಬೇಕು. ದೇಶಕ್ಕೆ ಒಂದು ಆಕಾಂಕ್ಷೆ ಇರುತ್ತದೆ. ಅದನ್ನು ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಲಾಯಿತು, ನಂತರ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕರ್ಯಕ್ರಮ ಆರಂಭಿಸಿದರು.
ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಪ್ರಮುಖರಾದ ಪ್ರಕಾಶ್,ಮಂಡಲ ಅಧ್ಯಕ್ಷ ಮುನೇಗೌಡ, ಮುಖಂಡರಾದ ಎಂಎಲ್ ಡಿಸಿ ಮುನಿರಾಜು,ರಮೇಶ್ ಗೌಡ,ಬಾಬು ಸೆಲ್ವಂ,ಎಸ್.ಎಲ್.ವಿ.ಶೇಖರ್, ಪಿ.ಡಿ.ಚಂದ್ರು, ಗೌರಮ್ಮ,ರಾಧಕೃಷ್ಣ,ಪುಷ್ಪರಾಜ್, ರಾಜಕುಮಾರ್, ಜಯಂತಿ, ಪಾರ್ವತಮ್ಮ, ರಾಧಾಕೃಷ್ಣರೆಡ್ಡಿ ಮತ್ತಿತರರಿದ್ದರು





























