
ಸಂಜೆವಾಣಿ ನ್ಯೂಸ್
ಮೈಸೂರು: ಫೆ.18:- ಕಳೆದ 12 ವರ್ಷಗಳಿಂದ ಮೋದಿಯವರು ದೇಶದ ಯಾವುದೇ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಹಾಗೂ ಇದುವರೆಗೂ ದೇಶದ ಜನರ ಮುಂದೆ ಪ್ರೆಸ್ ಮೀಟ್ ಮಾಡಿಲ್ಲ, ಒಂದು ಆಚಾರ್ಯ ವಿಚಾರ ಏನೆಂದರೆ ಕಳೆದ 12 ವರ್ಷಗಳಲ್ಲಿ ಸಾರ್ವಜನಿಕ ಭಾಷಣಗಳಲ್ಲಿ, ಚುನಾವಣೆಯ ಸಮಾವೇಶಗಳಲ್ಲಿ, ಮನ್ ಕಿ ಬಾತ್ ನಲ್ಲಿ ಮೋದಿ ಅವರು ತಮ್ಮ ಆವೇಶ, ಅಂತ ಘೋಷಣೆಯಾದ ಭಾಷಣಗಳು, ಭಾರತ-ಪಾಕಿಸ್ತಾನ ನಡುವೆ ಇರುವ ವಿರೋಧಿಸುವ ಭಾಷಣಗಳು, ಕಾಂಗ್ರೆಸ್ ಪಕ್ಷದ ಗೌರವ ತರುವ ಭಾಷಣಗಳು, ನೆಹರುರವರು, ಇಂದಿರಾಗಾಂಧಿ ರವರು, ರಾಜೀವ್ ಗಾಂಧಿರವರು, ಸೋನಿಯಾ ಗಾಂಧಿ, ಹಾಗೂ ರಾಹುಲ್ ಗಾಂಧಿಯವರ ಬಗ್ಗೆ ಭಾಷಣ ಮಾಡು ಅಂದ್ರೆ ಗಂಟಗಟ್ಟಲೆ ಭಾಷಣ ಮಾಡುತ್ತಾರೆ, ಇಂಥ ವಿಚಾರಗಳಲ್ಲಿ ಮೋದಿ ಅವರ ಪ್ರತಾಪ,ಆವೇಶ, ಆಕ್ರೋಶ ಹಾಗೂ ದೇಶ ಭಾಷಣಗಳಿಗೆ ಮಾತ್ರ 56 ಇಂಚೆ ಎದೆಯ ಪರಾಕ್ರಮವನ್ನು ತೋರಿಸುತ್ತಾರೆ, ದುರ್ದೈವ ಕೇಂದ್ರದ ಯಾವುದೇ ವಿರೋಧ ಪಕ್ಷದ ನಾಯಕರುಗಳು ಕೇಳುವ ಪ್ರಶ್ನೆಗಳಿಗೆ ಸಂಸತ್ತಿನಲ್ಲಾಗಲಿ ಅಥವಾ ಸಾರ್ವಜನಿಕ ಕ್ಷೇತ್ರಗಳಲ್ಲಾಗಲಿ , ಮೋದಿಯವರು ಉತ್ತರ ನೀಡುವುದಿಲ್ಲ, ಇತ್ತೀಚಿನ ಬೆಳವಣಿಗೆ ನೋಡುವಾಗ ಪ್ರಧಾನಮಂತ್ರಿಯದ ಮೋದಿಜಿ ಅವರು ವಿರೋಧ ಪಕ್ಷದ ನಾಯಕರದ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಉತ್ತರ ನೀಡುತ್ತಿಲ್ಲ ಅದೇ ರೀತಿಯಾಗಿ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೂ ಪ್ರೆಸ್ ಮೀಟ್ ಮಾಡಿ ಅವರ ಜೊತೆ ಉತ್ತರ ನೀಡುವುದಿಲ್ಲ ಯಾಕೆಂದರೆ ಮೋದಿಜಿ ಅವರಿಗೆ ಆರ್ ಎಸ್ ಎಸ್ ಮುಖಂಡರು ನೀಡಿದ ಸಂದೇಶ ಮಾತ್ರ ದೇಶದ ಜನರ ಮುಂದೆ ಇಡುತ್ತಾರೆ ಅಥವಾ ಬಿಜೆಪಿ ನಾಯಕರುಗಳು ನೀಡುವ ಮಾಹಿತಿಗಳನ್ನು ಮಾತ್ರ ಜನರ ಮುಂದೆ ಇಡುತ್ತಾರೆ.
ಕೇಂದ್ರದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು, voಣe ಚೋರಿಯ ಬಗ್ಗೆ, ಇಠಿsಣeiಟಿ ಫೈಲ್ಸ್ ಬಗ್ಗೆ, ಸೈನ್ಯದ ಮುಖ್ಯಸ್ಥರು ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡುವುದಕ್ಕೆ ಮೋದಿಯವರ ಸರ್ಕಾರ ಯಾಕೆ ಭಯಪಡುತ್ತಿದ್ದಾರೆ?
ಅಮೆರಿಕಾದೊಂದಿಗೆ ವ್ಯಾಪಾರ ಒಪ್ಪಂದದಿಂದ ದೇಶದ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಯಾಕೆ?
ಅಮೆರಿಕದ ಅಧ್ಯಕ್ಷರಾದ ಟ್ರಂಪ್ ರವರು 50% ರಿಂದ 18% ತೆರಿಗೆ ಇಳಿಸಿರುವುದೇ ಬಿಜೆಪಿ ಸರ್ಕಾರಕ್ಕೆ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಆದರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೇವಲ 3% ರಷ್ಟು ತೆರಿಗೆಯನ್ನು ಭಾರತ ದೇಶ ಬಂದಿತ್ತು, ಆದರೆ ಮೋದಿಯವರು 18 % ಪರ್ಸೆಂಟ್ ಏರಿಕೆ ಮಾಡಿರುವ ತೆರಿಗೆ ಬಗ್ಗೆ ಯಾವುದೇ ರೀತಿಯ ಅಮೆರಿಕ ವಿರುದ್ಧ ಧ್ವನಿಯತ್ತುತ್ತಿಲ್ಲ, ಯಾಕಂದ್ರೆ ಟ್ರಂಪ್ ಮುಂದೆ ಮೋದಿ ಅವರು ಶರಣಾಗತಿ ಆಗಿದ್ದಾರೆ, ಮೋದಿರವರು ಟ್ರಂಪ್ ಏನು ಹೇಳುತ್ತಾರೋ ಅದೇ ವೇದ ವಾಕ್ಯವಾಗಿ ದೇಶದ ಬಿಜೆಪಿ ಸರ್ಕಾರ ನಡೆಸುತ್ತಿದ್ದಾರೆ. ಇದೆಲ್ಲ ಗಮನಿಸಿದಾಗ ಮೋದಿಯವರು ಅಮೆರಿಕ ಸರ್ಕಾರ ಹೇಳಿದ ರೀತಿಯಾಗಿ ದೇಶದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದ್ದಾರೆ, ಒಂದು ರೀತಿಯಲ್ಲಿ ಮೋದಿ ಅವರು ಅಸಹಾಯಕರಾಗಿ ಯಾವುದಕ್ಕೂ ಉತ್ತರ ಕೊಡದ ರೀತಿಯಲ್ಲಿ ಅವಿದ್ಯಾವಂತ ಪ್ರಧಾನಮಂತ್ರಿಯಾಗಿ ಇಂದು ದೇಶದಲ್ಲಿ ಕಾಣಿಸುತ್ತಿದ್ದಾರೆ.
ಒಂದು ಕಡೆ ಮಾಧ್ಯಮಗಳ ಮುಂದೆಯೂ ಪ್ರೆಸ್ ಮೀಟ್ ಮಾಡಿ ಉತ್ತರ ನೀಡುತ್ತಿಲ್ಲ ಅಥವಾ ವಿರೋಧ ಪಕ್ಷದ ನಾಯಕರು ಕೇಳುವ ಪ್ರಶ್ನೆಗಳಿಗೆ ಮೋದಿಜಿ ಅವರು ಉತ್ತರ ನೀಡುತ್ತಿಲ್ಲ, ಎಲ್ಲೋ ಒಂದು ಕಡೆ ಮೋದಿಜಿ ಅವರು ದೇಶಕ್ಕೆ ಅಗೌರವ ತರುವಂತ ರೀತಿಯಲ್ಲಿ ಮೋದಿ ಅವರು ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಮುಂದಿನ 2029ರಲ್ಲಿ ನಡೆಯುವ ಕೇಂದ್ರದ ಚುನಾವಣೆಯಲ್ಲಿ ವಿದ್ಯಾವಂತ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವಂತಹ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.
ಅದೇ ರೀತಿ ಕರ್ನಾಟಕದಲ್ಲಿ 2028ಕ್ಕೆ ರಾಜ್ಯದ ಜನಸಾಮಾನ್ಯರು ಬೆಂಬಲದಿಂದ ಮತ್ತೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ 141 ಗೆಲ್ಲೆ ಗೆಲ್ಲುತ್ತೆವೆಂದು ನಮ್ಮ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಹೇಳಿದ್ದಾರೆ, ಈಗಾಗಲೇ ನನ್ನ ಕಾಂಗ್ರೆಸ್ ಸರ್ಕಾರ 1000 ದಿನಗಳನ್ನು ಪೂರೈಸಿದ್ದಾರೆ. ರಾಜ್ಯದ ಜನಸಾಮಾನ್ಯರಿಗೆ ಪಂಚ ಗ್ಯಾರೆಂಟಿ ಕೊಟ್ಟು ಹಳ್ಳಿ ಮಟ್ಟದಿಂದ ರಾಜ್ಯಮಟ್ಟದವರೆಗೂ ಮಧ್ಯಮ ವರ್ಗದವರು ಹಿಂದುಳಿದ ವರ್ಗದವರು ಅಭಿವೃದ್ಧಿ ಕಡೆಗೆ ಸಾಗುತ್ತಿದ್ದಾರೆ,ಇದು ಕಾಂಗ್ರೆಸ್ ಪಕ್ಷದ ಎಂದು ನಾವು ಭಾವಿಸುತ್ತೇವೆ. ಆದರೆ ಕಾಂಗ್ರೆಸ್ ಪಕ್ಷ ಯಾವತ್ತು ನಮ್ಮ ದೇಶವು ಯಾವುದೇ ದೇಶಗಳ ಮುಂದೆ ಮಂಡೂರಿಯ ಕೆಲಸವನ್ನು ಮಾಡಲಿಲ್ಲ ಆದರೆ ಇಂದು ಮೋದಿ ಅವರು ಪ್ರತಿಯೊಂದು ವಿದೇಶಿ ವ್ಯಾಪಾರ ಒಪ್ಪಂದದಲ್ಲೂ ಹಾಗೂ ದೇಶದ ಭದ್ರತೆ ವಿಚಾರದಲ್ಲೂ ಕೇಂದ್ರ ಬಿಜೆಪಿ ಸರ್ಕಾರ ಬೇರೆ ದೇಶಗಳಿಗೆ ಗುಲಾಮರಾಗಿ ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿರುವ ಪ್ರಜ್ಞಾವಂತ ಯುವಕರು, ದೇಶದ ನಾಗರಿಕರು ಹಾಗೂ ಮತದಾರರು ತೀವ್ರವಾಗಿ ಖಂಡಿಸಬೇಕಾಗಿದೆ. ದೇಶವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಮತ್ತು ಅಭಿವೃದ್ಧಿ ಮಾಡುವ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಬೇಕೆಂದು ಕೆಪಿಸಿಸಿ ಪರಿಶಿಷ್ಟ ಜಾತಿ ಭಾಗದ ಸದಸ್ಯರಾದ ರಾಕೇಶ್ ತಿಳಿಸಿದರು.































