
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ6: ಹೊಸಪೇಟೆಯಲ್ಲಿ ಆರಂಭವಾಗಲಿರುವ ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ವಿಭಾಗವನ್ನು ಆರಂಭಿಸುವ ಕಾರ್ಯಕ್ಕೆ ಶಾಸಕ ಹೆಚ್.ಆರ್.ಗವಿಯಪ್ಪ ಪ್ರಯತ್ನ ಆರಂಭಿಸಿದ್ದಾರೆ.
ಈ ಕುರಿತು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ರವರನ್ನು ಭೇಟಿ ಮಾಡಿ ಈ ಕುರಿತು ವಿಸ್ತೂರುತವಾಗಿ ಮಾತನಾಡಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೂ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೌಕರ್ಯಗಳನ್ನು ನೀಡುತ್ತಿದ್ದು ಏಷಿಯಾದ ಅತಿದೊಡ್ಡ ಮತು ಅತ್ಯಾಧುನಿ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಸರ್ಕಾರಿ ಆಸ್ಪತ್ರೆಯಾಗಿದ್ದು ಕಡಿಮೆ ದರ ಮತ್ತು ಬಡರೋಗಿಗಳಿಗೆ ಉಚಿತವಾಗಿ ಯಶಸ್ವಿನಿ ಸೇರಿದಂತೆ ವಿವಿಧ ವಿಮಾ ಸೌಕರ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು ಹೊಸಪೇಟೆಯ ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ತನ್ನ ವಿಭಾಗವನ್ನು ತೆರೆದಲ್ಲ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಈ ಕುರಿತು ಸಂಸ್ಥೆಯ ಮುಖ್ಯಸ್ಥರಾದ ಡಾ.ಬಿ.ದಿನೇಶ್ ರವರು ಸಹ ಉತ್ತಮವಾಗಿ ಸ್ಪಂದಿಸಿದ್ದು ಉತ್ತಮವಾದ ಸಲಹೆ ಸರ್ಕಾರದೊಂದಿಗೆ ಪತ್ರವ್ಯವಹಾರ ಮಾಡುವ ಮೂಲಕ ವಿಭಾಗ ಆರಂಭಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ಗವಿಯಪ್ಪ ತಿಳಿಸಿದ್ದಾರೆ.




























