
* 30435 ವಿದ್ಯಾರ್ಥಿಗಳು
* 43 ಪರೀಕ್ಷಾ ಕೇಂದ್ರಗಳು
* ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ
* ಕಳೆದ ವರ್ಷದ ಫಲಿತಾಂಶ 27 ನೇ ಸ್ಥಾನ
ಎನ್.ವೀರಭದ್ರಗೌಡ
ಬಳ್ಳಾರಿ, ಫೆ.05: ವಿದ್ಯಾರ್ಥಿಗಳ ಜೀವನದ ಮುಂದಿನ ಜೀವನಕ್ಕೆ ಮಾರ್ಗದರ್ಶಿಯಾದ ದ್ವಿತೀಯ ಪಿಯುನ ಈ ವರ್ಷದ ವಾರ್ಷಿಕ ಪರೀಕ್ಷೆ ಈ ತಿಂಗಳ 28 ರಿಂದ ಮಾರ್ಚ್ 17 ವರೆಗೆ ನಡೆಯಲಿದ್ದು. ಇದಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆ ನಡೆಸಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯನ್ನು ಒಳಗೊಂಡಂತೆ ಬಾಲಕಿಯರು 15155, ಬಾಲಕರು, 10490 ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 25645 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆಯುವವರಾಗಿದ್ದಾರೆ. ಫೇಲಾಗಿ ಮತ್ತೆ ಪರೀಕ್ಷೆ ಬರೆಯುವವರು 3806, ಖಾಸಗಿಯಾಗಿ ಅಂದರೆ ವಯಸ್ಸಿನ ಆಧಾರದ ಮೇಲೆ ನೇರವಾಗಿ ಪರೀಕ್ಷೆ ಬರೆಯುವವರು 967 ಹಾಗು ಪಾಸಾಗಿ ಫಲಿತಾಂಶ ಸುಧಾರಣೆಗಾಗಿ 17 ಜನ ಇದ್ದಾರೆ.
ಇವರಲ್ಲಿ ಸರ್ಕಾರಿ ಕಾಲೇಜಿನ – 7418, ಅನುದಾನಿತ ಖಾಸಗೀ ಕಾಲೇಜುಗಳ – 4380 ಮತ್ತು ಅನುದಾನ ರಹಿತ ಖಾಸಗೀ ಕಾಲೇಜುಗಳ – 13847 ವಿದ್ಯಾರ್ಥಿಗಳಿದ್ದಾರೆ.
ಕಳೆದ ವರ್ಷ ಈ ಎರೆಡು ಜಿಲ್ಲೆಗಳನ್ನು ಒಳಗೊಂಡು ಫಲಿತಾಂಶವು ರಾಜ್ಯದಲ್ಲಿ 27 ನೇ ಸ್ಥಾನ ಪಡೆದಿತ್ತು.
ಈ ವರ್ಷ ಫಲಿತಾಂಶ ಸುಧಾರಣೆಗೆ ಸರ್ಕಾರಿ ಕಾಲೇಜುಗಳಲ್ಲಿ ಮಧ್ಯಾಹ್ನ 3 ರಿಂದ ಸಂಜೆ 4 ವರೆಗೆ ಪರಿಹಾರದ ತರಗತಿಗಳನ್ನು ತೆಗೆದುಕೊಂಡು ನುರಿತ ಅಧ್ಯಾಪಕರನ್ನು ಕರೆಸಿ ಭೋದನೆ ಮಾಡಿ. ಪರೀಕ್ಷೆಗಳಲ್ಲಿ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ಉಪನ್ಯಾಸ ಕೊಡಿಸಲಾಗಿದೆಂದು.
ಈ ವರ್ಷ ರಾಜ್ಯ ಮಟ್ಟದಲ್ಲಿ ಎರೆಡು ಬಾರಿ ಪೂರ್ವ ಸಿದ್ದತಾ ಪರೀಕ್ಷೆ ಅಂದರೆ ಮೊದಲು ಪರೀಕ್ಷೆ ಜನವರಿ 2 ರಿಂದ ನಡೆಸಿದ್ದು ಶೇ 87 ಹಾಜರಾತಿಯಾಗಿತ್ತು. ಎರೆಡನೇ ಪೂರ್ವ ಸಿದ್ದತಾ ಪರೀಕ್ಷೆ ಮಾ.19 ರಿಂದ ಪೆ 2 ವರೆಗೆ ನಡೆಯಿತು. ಈ ಮಧ್ಯೆ 52 ಕೇಂದ್ರಗಳಲ್ಲಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳನ್ನು ಆರಂಭಿಸಲಾಗಿದೆ.ಎಂದು ಪದವಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಣ ಹಳ್ಳದ ಮನಿ ಅವರು ಸಂಜೆವಾಣಿಗೆ ತಿಳಿಸಿದ್ದಾರೆ.
ವಿಶೇಷ ತರಗತಿಗಳ ಮೂಲಕ ಈ ವರ್ಷದ ಫಲಿತಾಂಶವನ್ನು 20 ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿದೆಯಂತೆ.
ಲಿಖಿತ ಪರೀಕ್ಷೆಗೆ ವಿಜಯನಗರ ಜಿಲ್ಲೆಯಲ್ಲಿ 23 ಬಳ್ಳಾರಿ ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರ ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳನ್ನು ಜಂಬ್ಲಿಂಗ್ ಮಾಡಿ ಬೇರೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಸಲಾಗುತ್ತಿದೆ.

























