
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.10: ಪಟ್ಟಣದ ಜಯನಗರ ಬಡಾವಣೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದ ಹಿಂಭಾಗದಲ್ಲಿ ದಂಪತಿಗಳಿಬ್ಬರು ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಹೊಸಕೋಟೆ ಗ್ರಾಮದ ಗಣೇಶಗೌಡ ಮತ್ತು ಮಂಜುಳಾ ದಂಪತಿಗಳ ಪುತ್ರ ದರ್ಶನ್ (29) ಮತ್ತು ಮೃತನ ಪತ್ನಿ ಎನ್.ಎಲ್.ದಿವ್ಯ(25) ಮೃತ ದಂಪತಿಗಳು.
ನಾಟನಹಳ್ಳಿ ಗ್ರಾಮದ ಲಕ್ಷ್ಮಣಗೌಡ ಮತ್ತು ಸುನಂದ ದಂಪತಿಗಳ ಪುತ್ರಿಯನ್ನು ಕಳೆದ ಮೂರು ವರ್ಷಗಳ ಹಿಂದೆ ದರ್ಶನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಕಳೆದ ಒಂದು ವರ್ಷದಿಂದ ದಂಪತಿಗಳು ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮೃತ ದರ್ಶನ್ ಕ್ಯಾಬ್ ಚಾಲಕನಾಗಿದ್ದರೆ ಪತಿನ ದಿವ್ಯ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಉದ್ಯೋಗ ಮಾಡಿಕೊಂಡು ಜೊತೆಗೆ ಎಲ್.ಐ.ಸಿ ಏಜೆಂಟ್ ಆಗಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದರ್ಶನ್ – ದಿವ್ಯ ದಂಪತಿಗಳಿಗೆ ಎರಡು ವರ್ಷದ ರಕ್ಷಾ ಎನ್ನುವ ಹೆಣ್ಣು ಮಗು ಇದ್ದು ಈ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ನೇಣಿನ ಕುಣಿಕೆಯಿಂದ ಜಾರಿ ಬಿದ್ದ ಮಗು ಸಾವಿನ ಬಲೆಯಿಂದ ಬಚಾವ್ ಆಗಿದೆ. ನೇಣಿನ ಕುಣಿಕೆಯಿಂದ ಜಾರಿಬಿದ್ದು ಉಸಿರಾಡುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಮಗು ಅಪಾಯದಿಂದ ಪಾರಾಗಿದೆ.
ದಿವ್ಯ ಮತ್ತು ದರ್ಶನ್ ದಂಪತಿಗಳು ಅನೂನ್ಯವಾಗಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಾರಣದಿಂದ ದಂಪತಿಗಳು ಮಗುವಿನ ಸಮೇತ ಆತ್ಮಹತ್ಯೆಗೆ ನಿರ್ಧರಿಸಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ಮೃತ ದರ್ಶನ ತಂದೆ ಗಣೇಶಗೌಡ ಅವರು ಪಟ್ಟಣ ಪೆÇೀಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಟೌನ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.





























