Home ಜಿಲ್ಲೆ ಮಂಗಳೂರು ಕುಂದಾಪುರ | ಜಾಮೀನು ಷರತ್ತು ಉಲ್ಲಂಘನೆ: ರೌಡಿ ಬಂಧನ

ಕುಂದಾಪುರ | ಜಾಮೀನು ಷರತ್ತು ಉಲ್ಲಂಘನೆ: ರೌಡಿ ಬಂಧನ

ಕುಂದಾಪುರ, ಮಾ.೨೫: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಅಬುಬಕ್ಕರ್ (೪೮) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರೌಡಿ ಹಾಗೂ ಒಔಃ ಆಸಾಮಿಯಾಗಿ ಗುರುತಿಸಿಕೊಂಡಿರುವ ಅಬುಬಕ್ಕರ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ವಿಧಿಸಲಾದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆ ಜಾಮೀನು ರದ್ದುಪಡಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ರದ್ದುಪಡಿಸಿ ರಿಮಾಂಡ್ ವಾರಂಟ್ ಜಾರಿಗೊಳಿಸಿತು.
ಅದರಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಏಪ್ರಿಲ್ ೭ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.