Home ಜಿಲ್ಲೆ ಕಪ್ಪಗಲ್ಲು  ಮುನಿಸ್ವಾಮಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ

ಕಪ್ಪಗಲ್ಲು  ಮುನಿಸ್ವಾಮಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮಾ.26: ನಗರದ ಡಾ.ಸಿ. ಮುನಿಸ್ವಾಮಿ ಕಪ್ಪಗಲ್ಲು ಇವರಿಗೆ ಬೆಂಗಳೂರಿನ ಚಿತ್ರ ಸಂತೆ  ಇವರಿಂದ ನಟ  ಪುನೀತ್ ರಾಜ್ ಕುಮಾರ್  ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಮಾಜ ಸೇವೆ ಹಾಗೂ ಕಳೆದ 20 ವರ್ಷಗಳಿಂದ  ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬಂದಿರುವ   ಮುನಿಸ್ವಾಮಿಯವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಚಿತ್ರಸಂತೆ ಆಯೋಜನೆಯ ಅಧ್ಯಕ್ಷರ ಗಿರೀಶ್ ಗೌಡ, ಚಲನಚಿತ್ರ ನಾಯಕಿ  ರಚನಾ ರಾಯ್ ಹಾಗೂ ಹಿಂದಿ ಚಲನಚಿತ್ರ ನಾಯಕ ಜಯ ಪ್ರಭು ಲಿಂಗಾಯತ್ ಮತ್ತು ಸಿನಿ ಕ್ಷೇತ್ರದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.