ಉಡುಪಿ : ಬಾವಿಗೆ ಬಿದ್ದ ಚಿರತೆ ಮರಿ – ರಕ್ಷಣೆ

ಉಡುಪಿ-ಬಾವಿಗೆ ಬಿದ್ದ ಚಿರತೆ ಮರಿಯನ್ನು ರಕ್ಷಿಸಿರುವ ಘಟನೆ ಉಡುಪಿಯ ಮಣಿಪುರ ಗ್ರಾಮದ ಸಿ.ಎಸ್.ಐ.ಚರ್ಚ್ ಬಳಿ ನಡೆದಿದೆ. ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೆರಾ ಅವರ ಸಹೋದರ ಜೇಕಬ್ ಸಿಕ್ಕೇರಾ ಅವರ ಮನೆಯ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಬಾವಿಗೆ ಬಿದ್ದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿತ್ತು..,ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಡಲಾಗಿದೆ.
ಜೇಕಬ್ ಸಿಕ್ಕೇರ ಅವರ ತೋಟದ ಬಾವಿಯ ನೀರಿನ ಪಂಪ್ ಚಾಲೂ ಆಗದೆ ಇದ್ದ ಪರಿಣಾಮ ಮಧ್ಯಾಹ್ನದ ವೇಳೆ ತೆರಳಿ ಪರಿಶೀಲಿಸಿದಾಗ ಚಿರತೆ ಬಾವಿಯಲ್ಲಿ ಇರುವುದು ಕಂಡು ಬಂದಿದೆ. ಸುಮಾರು ೨-೩ ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆಯವರು ಮತ್ತು ಎನ್ ಜಿ ಒ ಉಡುಪಿಯ ಅಕ್ಷಯ್ ಶೇಟ್ ಹಾಗೂ ಸ್ಥಳೀಯರ ಸಹಕಾರದಿಂದ ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.