ಇಸ್ರೇಲ್, ಗಾಜಾ ಶಾಂತಿ ಒಪ್ಪಂದಕ್ಕೆ ಬರಲಿ

ಕೈರೋ,ಅ.7:- ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ದ ಆರಂಭವಾಗಿ ಇಂದಿಗೆ 2 ವರ್ಷ ಪೂರ್ಣಗೊಂಡಿದೆ. ಈ ನಡುವೆ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಈಜಿಪ್ಟ್‍ನಲ್ಲಿ ಮಾತುಕತೆ ಮುಂದುವರಿದಿದೆ.
ಆದಷ್ಟು ಬೇಗ ಶಾಂತಿ ಒಪ್ಪಂದಕ್ಕೆ ಬರುವ ಅಗತ್ಯವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

2023ರ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಎರಡನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶಾಂತಿಗೆ ಒತ್ತು ನೀಡಲಾಗಿದೆ, ಇದುವರೆಗೂ ಯುದ್ಧದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು ಇತರ 251 ಜನರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ
ಇದಕ್ಕೆ ಪ್ರತಿಯಾಗಿ ಇಸ್ರೇಲಿ ಸೇನೆ ಗಾಜಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 67,160 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ 18,000 ಮಕ್ಕಳು ಸೇರಿದ್ದಾರೆ ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾತುಕತೆ ಪ್ರಗತಿಯಲ್ಲಿ: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಯೋಜನೆಯ ಕುರಿತು ಅಂತಿಮ ಒಪ್ಪಂದಕ್ಕೆ ಬರುವ ಗುರಿಯನ್ನು ಹೊಂದಿರುವ ಮಾತುಕತೆಗಳು ಈಜಿಪ್ಟ್‍ನ ಶರ್ಮ್ ಎಲ್-ಶೇಖ್‍ನಲ್ಲಿ ಮುಂದುವರಿದಿದೆ.
ಪ್ಯಾಲೇಸ್ತೀನಿಯನ್ ಮತ್ತು ಈಜಿಪ್ಟ್ ಪ್ರಮುಖ ನಾಯಕರು ಮಾತಕುತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ಯಾಲೇಸ್ತಿನಿಯನ್ ಕೈದಿಗಳಿಗೆ ಪ್ರತಿಯಾಗಿ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕುರಿತಂತೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಾತನಾಡಿ “ಮುಂಬರುವ ದಿನಗಳಲ್ಲಿ” ಒತ್ತೆಯಾಳುಗಳ ಬಿಡುಗಡೆ ಘೋಷಿಸುವ ಆಶಯವಿದೆ ಎಂದು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿ ಇಸ್ರೇಲ್ ಮತ್ತು ಗಾಜಾ ನಡುವೆ “ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಅದನ್ನು ಅವರು ಬಳಸಿಕೊಂಡು ಶಾಂತಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ಹಮಾಸ್ ಶಾಂತಿ ಯೋಜನೆಯ ಪ್ರಸ್ತಾಪಗಳಿಗೆ ಭಾಗಶಃ ಒಪ್ಪಿಕೊಂಡಿದೆ. ನಿಶ್ಯಸ್ತ್ರೀಕರಣ ಮತ್ತು ಗಾಜಾದ ಆಡಳಿತದಲ್ಲಿ ಯಾವುದೇ ಭವಿಷ್ಯದ ಪಾತ್ರವನ್ನು ಹೊಂದಿರದಿರುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳಿಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದ್ದಾರೆ.

ಹಿರಿಯ ಇಸ್ರೇಲಿ ಭದ್ರತಾ ಮೂಲವೊಂದು ಹೇಳುವಂತೆ, ಮಾತುಕತೆಗಳು ಆರಂಭದಲ್ಲಿ ಒತ್ತೆಯಾಳುಗಳ ಬಿಡುಗಡೆಯ ಮೇಲೆ ಮಾತ್ರ ಗಮನಹರಿಸುತ್ತವೆ ಮತ್ತು ಹಂತವನ್ನು ಪೂರ್ಣಗೊಳಿಸಲು ಹಮಾಸ್‍ಗೆ ಕೆಲವು ದಿನಗಳ ಕಾಲಾವಕಾಶ ನೀಡುತ್ತವೆ ಎಂದು ಹೇಳಲಾಗಿದೆ.
ಈಜಿಪ್ಟ್ ಮತ್ತು ಕತಾರ್ ಅಧಿಕಾರಿಗಳು ಇಸ್ರೇಲ್ ಮತ್ತು ಹಮಾಸ್ ಎರಡರ ನಿಯೋಗಗಳೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಲಿರುವ ಮಾತುಕತೆಯ ಎರಡನೇ ದಿನ ಮುಂದುವರಿದಿದೆ.