Home ಸುದ್ದಿ ಅಂತರಾಷ್ಟ್ರೀಯ ಇರಾನ್ ದಾಳಿ ಅಮೆರಿಕಕ್ಕೆ 800 ಮಿಲಿಯನ್ ಡಾಲರ್ ನಷ್ಟ

ಇರಾನ್ ದಾಳಿ ಅಮೆರಿಕಕ್ಕೆ 800 ಮಿಲಿಯನ್ ಡಾಲರ್ ನಷ್ಟ

ವಾಷಿಂಗ್‍ಟನ್, ಮಾ.21:– ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮೊದಲ ಎರಡು ವಾರಗಳಲ್ಲಿ, ಇರಾನ್ ನಡೆಸಿದ ದಾಳಿಗಳಿಂದ ಅಮೆರಿಕ ಬಳಕೆ ಮಾಡುತ್ತಿರುವ ಸೇನಾ ನೆಲೆಗಳಿಗೆ ಸುಮಾರು $800 ಮಿಲಿಯನ್ (ಸುಮಾರು 6,600 ಕೋಟಿ) ಹಾನಿಯಾಗಿದೆ ಎಂದು ಹೊಸ ವಿಶ್ಲೇಷಣೆಯೊಂದು ತಿಳಿಸಿದೆ.
ಸಿಸ್ ಹಾಗೂ ಬಿಬಿಸಿ ನಡೆಸಿದ ಸಂಯುಕ್ತ ಅಧ್ಯಯನದಲ್ಲಿ ಈ ಅಂಕಿ-ಅಂಶ ಬಹಿರಂಗವಾಗಿದೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಆರಂಭಿಕ ಹಂತದಲ್ಲೇ ಈ ದಾಳಿಗಳನ್ನು ನಡೆಸಿದೆಯೆಂದು ವರದಿ ಹೇಳಿದೆ.


ಇರಾನ್ ದಾಳಿಗಳ ಪ್ರಮುಖ ಗುರಿಯಾಗಿದ್ದವು ಅಮೆರಿಕ ರಕ್ಷಣಾ ವ್ಯವಸ್ಥೆಗಳು. ವಿಶೇಷವಾಗಿ ಖಿಊಂಂಆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ರಾಡಾರ್ ಘಟಕಗಳು ಭಾರೀ ಹಾನಿಗೊಳಗಾಗಿವೆ. ಜೋರ್ಡಾನ್‍ನ ಏರ್‍ಬೇಸ್‍ನಲ್ಲಿ ಇರುವ ಒಂದು ರಾಡಾರ್ ವ್ಯವಸ್ಥೆಗೆ ಮಾತ್ರವೇ ಸುಮಾರು $485 ಮಿಲಿಯನ್ ಮೌಲ್ಯದ ಹಾನಿ ಸಂಭವಿಸಿದೆ. ಇದರ ಜೊತೆಗೆ, ಸೇನಾ ಕಟ್ಟಡಗಳು, ಸೌಲಭ್ಯಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಸುಮಾರು $310 ಮಿಲಿಯನ್ ಹಾನಿಯಾಗಿದೆ.


ಇರಾನ್ ದಾಳಿಗಳು ಜೋರ್ಡಾನ್, ಯುಎಇ, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿರುವ ಅಮೆರಿಕಾ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ.ಮುಖ್ಯವಾಗಿ ಕೆಳಗಿನ ನೆಲೆಗಳಲ್ಲಿ ಹಾನಿ ಕಂಡುಬಂದಿದೆ:ಈ ನೆಲೆಗಳ ಮೇಲೆ ಪುನಃ ಪುನಃ ದಾಳಿಗಳು ನಡೆದಿರುವುದು ಉಪಗ್ರಹ ಚಿತ್ರಗಳಲ್ಲಿ ದೃಢಪಟ್ಟಿದೆ.


ಉಪಗ್ರಹ ಚಿತ್ರಗಳ ವಿಶ್ಲೇಷಣೆಯಲ್ಲಿ, ರಾಡಾರ್ ವ್ಯವಸ್ಥೆಗಳ ರಕ್ಷಣಾ ಕವಚಗಳಾದ “ರಾಡೋಮ್”ಗಳು ಸಂಪೂರ್ಣವಾಗಿ ಧ್ವಂಸವಾಗಿರುವುದು ಕಂಡುಬಂದಿದೆ. ಇದು ಅಮೆರಿಕ ಸೇನೆಯ ನಿಗಾ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿದೆ.ಯುದ್ಧ ಆರಂಭದ ಮೊದಲ 6 ದಿನಗಳಲ್ಲಿ ಅಮೆರಿಕಾ ವೆಚ್ಚ $11.3 ಬಿಲಿಯನ್,12 ದಿನಗಳಲ್ಲಿ $16.5 ಬಿಲಿಯನ್ ಆಗಿದೆ ಎಂದು ವರದಿ ತಿಳಿಸಿದೆ.ಇದೀಗ ಪೆಂಟಗನ್ ಇನ್ನೂ $200 ಬಿಲಿಯನ್ ಹೆಚ್ಚುವರಿ ನಿಧಿಗೆ ಮನವಿ ಮಾಡಿದೆ.


ಈ ಯುದ್ಧದಲ್ಲಿ ಇದುವರೆಗೆ ಸುಮಾರು 3,200 ಜನರು ಮೃತಪಟ್ಟಿದ್ದಾರೆ, ಅದರಲ್ಲಿ 1,400 ನಾಗರಿಕರು ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ. ಅಮೆರಿಕ ಸೇನೆಯ 13 ಯೋಧರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.“ಇರಾನ್ ವಿರುದ್ಧ ನಾವು ಉತ್ತಮವಾಗಿ ಮುನ್ನಡೆಯುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ. ಇರಾನ್ ನಡೆಸಿದ ಪ್ರತಿದಾಳಿಗಳು ಅಮೆರಿಕ ಸೇನಾ ಮೂಲಸೌಕರ್ಯಕ್ಕೆ ಭಾರೀ ಹಾನಿ ಉಂಟುಮಾಡಿದ್ದು, ಯುದ್ಧದ ವೆಚ್ಚ ಹಾಗೂ ತೀವ್ರತೆ ಎರಡೂ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.