Home ಜಿಲ್ಲೆ ಮಂಗಳೂರು ಆಲೆಟ್ಟಿ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಆಲೆಟ್ಟಿ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸುಳ್ಯ:ಆಲೆಟ್ಟಿ ಶ್ರೀ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವವು ಫೆ.೧೩ ರಿಂದ ೧೭ ರ ತನಕ ನಡೆಯಲಿದ್ದು ಇದರ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಶನಿವಾರ ನಡೆಯಿತು.
ಬೆಳಗ್ಗೆ ದೇವರಿಗೆ ನಿತ್ಯ ಪೂಜೆಯಾಗಿ ಮುಹೂರ್ತದ ಗೊನೆ ಕಡಿದು ತರಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಪ್ರದಾನ ಅರ್ಚಕ ಹರ್ಷಿತ್ ಬನ್ನಿಂತಾಯ, ಸಹ ಅರ್ಚಕ ಗೋಪಾಲಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ಚಂದ್ರ ಕಲ್ಲೆಂಬಿ, ವಿಜಯ ಕುಮಾರ್ ಆಲೆಟ್ಟಿ, ನವೀನ್ ಕುಮಾರ್ ಗುಂಡ್ಯ, ವನಜಾಕ್ಷಿ ಆಲೆಟ್ಟಿ, ಶೋಭಾಕುಮಾರಿ ಗುಂಡ್ಯ, ಭಜನಾ ಸಂಘದ ಗೌರವಾಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ, ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ, ರಾಮಚಂದ್ರ ಆಲೆಟ್ಟಿ, ಲಕ್ಷ್ಮಣ ಗೌಡ ಪರಿವಾರ, ಅವಿನ್ ಆಲೆಟ್ಟಿ, ನಿಖೇಶ್ ರೈ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.