
ನ್ಯೂಯಾರ್ಕ್, ಮಾ,23- ಅಮೆರಿಕದ ಹವಾಯಿಯಲ್ಲಿ ಚಂಡಮಾರುತದ ಅಬ್ಬರದಿಂದ ಸುಮಾರು 1 ಶತಕೋಟಿ ಡಾಲರಿಗೂ ಅಧಿಕ ನಷ್ಟವಾಗಿದೆ ಎಂದು ಹವಾಯಿ ರಾಜ್ಯಪಾಲ ಜೋಶ್ ಗ್ರೀನ್ ತಿಳಿಸಿದ್ದಾರೆ.
ಸತತ ಎರಡು ಬಿರುಗಾಳಿಯ ಅಬ್ಬರಕ್ಕೆ ಹವಾಯಿಯ ಪ್ರಮುಖ ಭಾಗಗಳಲ್ಲಿ 50 ಇಂಚು ಮಳೆಯಾಗಿದೆ, ಮಳೆ ಅನಾಹುತದಿಂದ ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿ ನಷ್ಟವಾಗಿದೆ. ಒವಾಹು ದ್ವೀಪದ ಕೆಲವು ಭಾಗಗಳು ಸಂಪೂರ್ಣವಾಗಿ ನಾಶವಾಗಿದೆ ಎಂದಿದ್ದಾರೆ.
ಚಂಡಮಾರುತ ಮತ್ತು ಮಳೆ ಅನಾಹುತದಿಂದ ಎದುರಾದ ಸಂಕಷ್ಟದಿಂದ ಈವರೆಗೆ 230 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅದೃಷ್ಟವಶತ್ ಈವರೆಗೆ ಯಾವುದು ಸಾವನ್ನಪ್ಪಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸಮಸ್ಯೆಗೆ ಸಿಲುಕಿದ್ದ ಜನರನ್ನು ರಕ್ಷಿಸಿ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ನಿಯೋಜನೆ ಮಾಡಲಾಗಿದೆ, ಅವರಿಗೆ ಅಲ್ಲಿ ಅಗತ್ಯವಿರುವ ಆಹಾರ, ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶ್ವೇತಭವನದೊಂದಿಗೆ ಕಚೇರಿಯ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುವಂತೆ ಮನವಿ ಮಾಡಲಾಗಿದೆ.
2004 ರ ನಂತರದ ರಾಜ್ಯದಲ್ಲಿ ಅತ್ಯಂತ ಬೀಕರ ಪ್ರವಾಹ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಸಮಯ, ಅಧಿಕಾರಿಗಳು ಒವಾಹುದಲ್ಲಿ ಕೆಲವು ಸ್ಥಳಾಂತರಿಸುವಿಕೆ ಮತ್ತಷ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದ ಇತರ ಭಾಗಗಳು ಅಪಾಯದಲ್ಲಿವೆ. “ವೇಗವಾಗಿ ನೀರು ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಗಿದೆ ಎಂದಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಮೌಯಿ ಕೌಂಟಿ ಎಂಟರಿಂದ 10 ಇಂಚು ಮಳೆಯಾಗುವ ನಿರೀಕ್ಷೆ ಇದೆ. ಚಂಡಮಾರುತ ಬೀಸುತ್ತಿದ್ದಂತೆ ದ್ವೀಪಗಳ ನಡುವೆ ದೋಣಿ ವಿಹಾರ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಹವಾಯಿ ರಾಷ್ಟ್ರೀಯ ಗಾರ್ಡ್ 120 ವರ್ಷ ಹಳೆಯದಾದ ವಹಿಯಾವಾ ಅಣೆಕಟ್ಟಿನಲ್ಲಿ ನೆಲೆಸಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

























