ಹಂಪಿ ಉತ್ಸವದಲ್ಲಿ ಟಗರು ಸಾಂಗ್ ಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

(ಸಂಜೆವಾಣಿ ಪ್ರತಿನಿಧಿಯಿಂದ)

ಹಂಪಿ, ಫೆ.14: ಉತ್ಸವದ ಮೊದಲ ದಿನವಾದ ನಿನ್ನೆ ಎಂ.ಪಿ ಪ್ರಕಾಶ್ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನಂತರ ನಟ ಶಿವ ರಾಜಕಮಾರ್ ‘ಟಗರು ಬಂತು ಟಗರು’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಜನಸ್ತೋಮಕ್ಕೆ ರಂಜನೆ ನೀಡಿದರು.

ಬಳಿಕ 1986 ರಲ್ಲಿ ತೆರೆಕಂಡಿದ್ದ ತಾವೇ ನಟಿಸಿದ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯ ಗಾಯನದ. ರಥ ಸಪ್ತಮಿ ಚಿತ್ರದ ‘ನೀ ಯಾರು, ನಾ ಯಾರೋ’ ಹಾಡು ಹಾಡುವ ಮೂಲಕ ಕೇಳುಗರನ್ನು ಗಾನ ಲಹರಿಯಲ್ಲಿ ತೇಲಾಡಿಸಿದರು.ನಂತರ 1996ರ ‘ಜನುಮದ ಜೋಡಿ’ ಚಿತ್ರದ ಎಲ್.ಎನ್.ಶಾಸ್ತ್ರಿ ಹಾಡಿರುವ ‘ಕೋಲುಮಂಡೆ ಜಂಗಮ’ ಹಾಡು ಹಾಡಿ ನೃತ್ಯ ಮಾಡಿ ನೆರೆದ ಅಭಿಮಾನಿಗಳ ಮನಸೂರೆಗೊಂಡರು.