Home ಜಿಲ್ಲೆ ಮಂಗಳೂರು ಸುಳ್ಯ ತಾಲೂಕು ಮಹಿಳಾ ಗೌಡ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಸುಳ್ಯ ತಾಲೂಕು ಮಹಿಳಾ ಗೌಡ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಸುಳ್ಯ:ಸುಳ್ಯ ಗೌಡರ ಯುವ ಸೇವಾ ಸಂಘ ಇದರ ತಾಲೂಕು ಮಹಿಳಾ ಘಟಕ ವತಿಯಿಂದ ಮಂಗಳವಾರ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಮಹಿಳಾ ಸಮಾಜ ಗೌರವಾಧ್ಯಕ್ಷೆ ಹರಿಣಿ ಸದಾಶಿವ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಬಿ. ಆಗಮಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗೌಡ ಯುವ ಸೇವಾ ಸಂಘ ಇದರ ಅಧ್ಯಕ್ಷ ಗಂಗಾಧರ ಪಿ. ಎಸ್, ಜೆಸಿಐ ಬೆಳ್ಳಾರೆ ವಲಯ ಅಧ್ಯಕ್ಷೆ ಪೂರ್ಣಿಮಾ ಪೆಲಂಪಾಡಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಹಾಗೂ ಗ್ರಾ.ಪಂ.ಗಳಲ್ಲಿ ಸ್ವಚ್ಛವಾಯಿನಿ ವಾಹನ ಚಾಲಕಿಯಗಿ ಕಾರ್ಯನಿರ್ವಹಿಸಿದ ಪವಿತ್ರ ಲೊಕೇಶ್ ಪಡ್ಡಂಬೈಲು, ಸವಿತಾ ಪಡ್ಪು, ನಿಶ್ವಿತ ಬೆಳ್ಳಾರೆ, ಕವಿತಾ ಮುರುಳ್ಯ, ಸುಳ್ಯದಲ್ಲಿ ಕಳೆದ ೧೦ ವರ್ಷಗಳಿಂದ ರಿಕ್ಷಾ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ದಯಾನಂದ ಅವರನ್ನು ಗೌರವಿಸಲಾಯಿತು.
ಮೀನಾಕ್ಷಿ ರಾಮಕಜೆ ಪ್ರಾರ್ಥಿಸಿ, ಘಟಕದ ಕೋಶಾಧಿಕಾರಿ ತಾರಾ ಬೆಳ್ಳಾರೆ ಸ್ವಾಗತಿಸಿದರು. ಉಪಾಧ್ಯಕ್ಷೆ ಜಯಲಕ್ಷ್ಮಿ ಜನಾರ್ಧನ ನಾರ್ಕೋಡು ವಂದಿಸಿ, ಸವಿತಾ ಸಂದೇಶ್ ಸೂತೋಂಡು ಕಾರ್ಯಕ್ರಮ ನಿರೂಪಿಸಿದರು. ಭಾರತಿ ಉಳುವಾರು, ಪುಷ್ಪಾಮೇದಪ್ಪ, ಕುಸುಮ ಕೊಳಂಜಿಕೋಡಿ, ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ ಸನ್ಮಾನ ಪತ್ರ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.