
ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದ ಬಳಕೆಯನ್ನು ನೋಡಿದರೆ ಈ ಭೂಮಿ ಮೇಲೆ ಅವರಂತಹ ಮಾತುಗಾರರು, ಮಾತನಾಡುವವರು ಬೇರೆ ಯಾರು ಇಲ್ಲವೇನೋ ಎನ್ನುವ ರೀತಿಯಲ್ಲಿ ಅವರ ಪದಗಳನ್ನು ಬಳಸುತ್ತಿದ್ದಾರೆ ಎಂದು ಕೇಂದ್ರದ ಸಚಿವ ಹೆಚ್ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಎಂಐಟಿ ಕಾಲೇಜಿನಲ್ಲಿ ಇಂದು ಬೆಳಗ್ಗೆ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ,ಸಿಎಂ ಆಗಿದ್ದ ಕಾಲದಲ್ಲಿ ನಾವುಗಳು ಸಮ್ಮಿಶ್ರ ಸರ್ಕಾರ ನಡೆಸಿದ ಸಮಯದಲ್ಲಿ ಅವರು ಮಾಡಿ ಹೋಗಿದ್ದ ಎಲ್ಲಾ ಕೊಳಕುಗಳನ್ನು ನಾನು ನಂತರದ 14 ತಿಂಗಳ ಕಾಲದ ನಡೆಸಿದ ಆಡಳಿತದಲ್ಲಿ ತೊಳೆಯುವಂತಾಯಿತು. ಸಿದ್ದರಾಮಯ್ಯ ಅವಧಿಯಲ್ಲಿ ಕಾನೂನು ಬಾಹಿರವಾಗಿ ನಡೆಸಿದ ಎಲ್ಲಾ ಕಾಮಗಾರಿಗಳನ್ನು ನಾವು ಕಾನೂನು ಬದ್ಧವಾಗಿ ಮಾಡುವಷ್ಟರಲ್ಲಿ ನಮ್ಮ ಅವಧಿಯೇ ಮುಗಿದುಹೋಗಿತ್ತು. ಇವರ ಬಗ್ಗೆ ಹೇಳುತ್ತಾ ಹೋದರೆ ಸಮಯವೇ ಸಾಲದು ಎಂದು ಕಿಡಿಕಾರಿದರು.
ಹಿಂದುಳಿದ ವರ್ಗದವರು ದಲಿತರು ಸೇರಿದಂತೆ ಇತರ ವರ್ಗಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿಯನ್ನು ವೇತನವನ್ನು ಸಹ ಕಡಿತಗೊಳಿಸಲಾಗಿದೆ ಇನ್ನು ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮನಗಳನ್ನು 15 ಲಕ್ಷ ಮನೆಗಳನ್ನು ಕಟ್ಟಿಕೊಡುತ್ತಿದ್ದೇವೆ ಎಂದು ತಿಳಿದಿದ್ದೀರಿ. ಆದರೆ ಈವರೆಗೆ ಒಂದು ಮನೆಗಳನ್ನು ಕಟ್ಟಿಸಿ ಕೊಟ್ಟಿಲ್ಲ ಆದರೆ ನಿಮ್ಮ ದಾಖಲೆಗಳ ಪ್ರಕಾರ ಲಕ್ಷಾಂತರ ಮನೆಗಳನ್ನು ಕಟ್ಟಿದ್ದಾಗಿ ನೀವು ಹೇಳುತ್ತಿದ್ದೀರಿ ಮನೆಗಳನ್ನು ಕಟ್ಟೀದ್ದೀರಿ ಎನ್ನುವ ಬಗ್ಗೆ ಮಾಹಿತಿಗಳನ್ನ ಇದ್ದರೆ ನೀಡಿರಿ ಎಂದು ಕೇಳಿದರು.
ರಾಜ್ಯದ ಕಥೆ ಬೇರೆಯಾದರೆ ದಾವಣಗೆರೆಯಲ್ಲಿ ಹಲವಾರು ವರ್ಷಗಳಿಂದ ಜನರು ಮನೆಗಳೆ ಇಲ್ಲದೆ ಬೀದಿಯಲ್ಲಿ ಬದುಕುತ್ತಿದ್ದಾರೆ. ಇವರೆಲ್ಲ ನಿಮಗೆ ಕಣ್ಣಿಗೆ ಕಾಣುವುದಿಲ್ಲವೇ, ಅವರಿಗೆ ನೀವು ಮನೆ ಕೊಡಬೇಕು ಎನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ನೀವುಗಳು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಹೋಗುತ್ತಿದ್ದೀರಿ. ಅದನ್ನ ಪ್ರಶ್ನೆ ಮಾಡಿದರೆ ನೀವು ಕೇವಲ ಬಿಜೆಪಿಯ ತಪ್ಪುಗಳನ್ನು ಹೇಳುತ್ತಿದ್ದೀರಿ, ಅಂದಹಾಗೆ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಚುನಾವಣೆಗಾಗಿ ನೀವು 2018ರಲ್ಲಿ ಆತುರಾತುರವಾಗಿ ಕೈಗೊಂಡ ಕಾಮಗಾರಿಗಳಿಗೆ ಆರ್ಥಿರ್ಕ ಇಲಾಖೆಯ ಅನುಮತಿಯನ್ನೇ ಪಡೆಯದೆ ರಾಜ್ಯ ಸರ್ಕಾರದ ಆದೇಶವನ್ನೇ ಪಡೆಯದೆ ಏಕಾಏಕಿ ನಡೆಸಿದ ಕಾಮಗಾರಿಗಳನ್ನು ಕಾನೂನು ಬದ್ಧವಾಗಿ ಅವುಗಳ 1750 ಕೋಟಿ ಹಣವನ್ನು ಪಡೆಯಲು ಮತ್ತೆ ನಾವು ಕಾನೂನು ಬದ್ಧವಾಗಿ ಶ್ರಮ ಪಡಬೇಕಾಗಿತ್ತು. ನೀವು ಈ ವೇಳೆ ಚುನಾವಣೆಗಾಗಿ ಇಷ್ಟೆಲ್ಲ ಕಸರತ್ತು ಮಾಡಿದ್ದೀರಿ ಎಂದು ಕಿಡಿ ಕಾರ್ಯಕರ್ತರು.
ಇದೀಗ ನೀವುಗಳು ಆಡಳಿತ ನಡೆಸುತ್ತಿರುವ ಈ ಮೂರು ವರ್ಷಗಳ ಕಾಲದಲ್ಲಿ ಯಾವುದೇ ಶಾಶ್ವತ ಯೋಜನೆಗಳು ಆಗಿಲ್ಲ. ಇದನ್ನು ಬಿಡಿ ರಾಜ್ಯದ ರೈತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಅದರಲ್ಲೂ ದಾವಣಗೆರೆಯಲ್ಲಿ ಮೆಕ್ಕೆಜೋಳ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ರೈತರ ಮೆಕ್ಕೆಜೋಳದ ಬೆಳೆದ ಹಣವನ್ನ ಸರ್ಕಾರ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿ ಯಲ್ಲಿ ರಮೇಶ್ ಜಾರಕೀಹೊಳಿ, ಮುರುಗೇಶ್ ನಿರಾಣಿ, ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ, ಹರಿಹರದ ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಇತರರು ಇದ್ದರು.























