ಬೀದರ್: ಜ.೨೩:ರಾಜಸ್ತಾನದಲ್ಲಿ ನಡೆದ ೧೪ ವರ್ಷದ ಒಳಗಿನ ಮಿಸ್ ಇಂಡಿಯಾ ಜೂನಿಯರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಜಿಲ್ಲೆಯ ಪೂರ್ವಿ ಬಿರಾದಾರ ಅವರನ್ನು ನಮ್ಮ ಕರ್ನಾಟಕ ಸೇನೆಯಿಂದ ನಗರದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಜಿಲ್ಲೆಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯ್ಯುತ್ತಿದ್ದಾರೆ. ಮಿಸ್ ಇಂಡಿಯಾ ಜೂನಿಯರ್ ಸ್ಪರ್ಧೆಯ ಸಾಂಸ್ಕೃತಿಕ ವಿಭಾಗ ಹಾಗೂ ಗ್ರ್ಯಾಂಡ್ ಫಿನಾಲೆದಲ್ಲಿ ಪೂರ್ವಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಪೂರ್ವಿ ಅವರ ಸಾಧನೆ ಜಿಲ್ಲೆಯ ಮಕ್ಕಳಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಉದಯ ಅಷ್ಟೂರೆ, ರಾಜಕುಮಾರ ಜಮಾದಾರ್, ಸಂತೋಷ್ ಪಾಟೀಲ, ಅನಿಲ್ ರಾಜಗೀರಾ, ಸಂಗಮೇಶ ಬಿರಾದಾರ, ರಾಜಕುಮಾರ ನೆಲವಾಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಶಿವದಾಸ ಸ್ವಾಮಿ, ಸಂಜುಕುಮಾರ ಬಿರಾದಾರ ಮತ್ತಿತರರು ಇದ್ದರು.
ನೇಮಕ: ಸೇನೆಯ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಸಂಗಮೇಶ ಗೌಸಪುರೆ, ಯುವ ಘಟಕದ ಉಪಾಧ್ಯಕ್ಷರಾಗಿ ರಾಜೇಶ್ ಕುಲಕರ್ಣಿ, ಬೀದರ್ ಉತ್ತರ ಮಹಿಳಾ ಘಟಕದ ಅಧ್ಯಕ್ಷರಾಗಿ ಭಾಗ್ಯಶ್ರೀ ಅಮಲಾಪುರೆ ಹಾಗೂ ಬೀದರ್ ದಕ್ಷಿಣ ಘಟಕದ ಉಫಾಧ್ಯಕ್ಷರಾಗಿ ಸುಧೀರ್ ಹೇಡೆ ಅವರನ್ನು ಆಯ್ಕೆ ಮಾಡಲಾಯಿತು.






























