ಭಾರತಕ್ಕೆ ಬಂದ ಶಾಸಕ ಭರತ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.3: ಪ್ರವಾಸಕ್ಕೆ ತೆರಳಿ ದುಬೈನಲ್ಲಿ ಸಿಲುಕಿ ಕೊಂಡಿದ್ದ ನಗರದ ಶಾಸಕ ನಾರಾ ಭರತ್ ರೆಡ್ಡಿ ಇಂದು ಭಾರತಕ್ಕೆ ಆಗಮಿಸಿದ್ದಾರೆ.

ಅವರು ಓಮೆನ್ ದೇಶದ ಮೂಲಕ ದೆಹಲಿಗೆ ಬಂದಿದ್ದಾರೆ. ಕುಟುಂಬ ಸಮೇತರಾಗಿ ದುಬೈ ಪ್ರವಾಸಕ್ಕೆ ತೆರಳಿದ್ದರು ಅವರು.

ಕಳೆದೆ ಕೆಲ ದಿನಗಳಿಂದ ಅವರು ಅಲ್ಲಿದ್ದರು .ನಿನ್ನೆ ವಿಡಿಯೋ ಸಂದೇಶದ ಮೂಲಕ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ದೆಹಲಿಗೆ ಅಗಮಿಸಿದ್ದು ನಾಳೆ ಬಳ್ಳಾರಿಗೆ ಬರಲಿದ್ದಾರಂತೆ.