ಬ್ರಿಮ್ಸ್ ಡಾಕ್ಟರ್ಸ್ ಕ್ವಾರ್ಟರ್ಸ್ನಲ್ಲಿ ಮಹಿಳೆಯರ ಸಂಭ್ರಮದ ಹೊಳಿ ಆಚರಣೆ

ಬೀದರ್, ಮಾ ೩: ಬೀದರ್‌ನ ಬ್ರಿಮ್ಸ್ ಡಾಕ್ಟರ್ಸ್ ಕ್ವಾರ್ಟರ್ಸ್ನಲ್ಲಿ ಸೋಮವಾರ ರಾತ್ರಿ ಅಲ್ಲಿಯ ಮಹಿಳೆಯರು ಸಂಭ್ರಮ ಹಾಗೂ ಭಕ್ತಿಭಾವದಿಂದ ಹೊಳಿ ಆಚರಿಸಿದರು.
ವಿವಿಧ ಬಣ್ಣಗಳ ಸೀರೆಗಳಲ್ಲಿ ಸಿಂಗಾರಗೊAಡ ಮಹಿಳೆಯರು ಒಂದಾಗಿ ಸೇರಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಹೊಳಿ ದಹನ ನೆರವೇರಿಸಿದರು.

ಕಾರ್ಯಕ್ರಮದ ವೇಳೆ ಸಾಂಪ್ರದಾಯಿಕ ಹಾಡುಗಳು, ಭಜನೆ ಹಾಗೂ ಹರ್ಷೋದ್ಗಾರ ಮೊಳಗಿದವು. ಮಹಿಳೆಯರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಹಿರಿಯರು ಹಾಗೂ ನಿವಾಸಿಗಳು ಹಾಜರಿದ್ದು, ಹಬ್ಬದ ಮಹತ್ವ ವಿವರಿಸಿದರು. ಹೊಳಿ ದಹನವು ದುಷ್ಟದ ದಹನ ಮತ್ತು ಸತ್ಪ್ರವೃತ್ತಿಯ ವಿಜಯದ ಸಂಕೇತವಾಗಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಐಕ್ಯತೆಯನ್ನು ಬೆಳೆಸುವ ಹಬ್ಬವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಆಚರಣೆ ಕೇವಲ ಹಬ್ಬದ ಸಂಭ್ರಮವಷ್ಟೇ ಅಲ್ಲದೆ, ಪರಸ್ಪರ ಬಾಂಧವ್ಯ ಗಟ್ಟಿಗೊಳಿಸುವ ವೇದಿಕೆಯಾಗಿದ್ದು, ಸಮಾಜದಲ್ಲಿ ಐಕ್ಯತೆ ಮತ್ತು ಸಹಕಾರದ ಸಂದೇಶ ಸಾರಿತು.