
ಸಂಜೆವಾಣಿ ವಾರ್ತೆ
ಹನೂರು ಮಾ 25:- ರೈತರು ಗ್ರಾಹಕರು ಸಾರ್ವಜನಿಕರು ಬೇಸಿಗೆ ಸಮಯದಲ್ಲಿ ವಿದ್ಯುತ್ತನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಸುರಕ್ಷಿತವಾಗಿ ಬಳಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಮೈಸೂರು ಕೊಡಗು ವೃತ್ತ ಚಾ.ವಿ.ಸ.ನಿ.ನಿ, ಚಾಮರಾಜನಗರ ಅಧೀಕ್ಷಕ ಇಂಜಿನಿಯರ್ ಎಸ್.ಇ ಸೋಮಶೇಖರ್ ಅವರು ತಿಳಿಸಿದರು.
ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೇಂದ್ರ ಕಛೇರಿ ಆವರಣದಲ್ಲಿ ಇಂದು ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಒಟ್ಟು 13 ದೂರುಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ ಸ್ಥಳೀಯ ಪರಿಹಾರಗಳನ್ನು ಮಾಡಲಾಗಿದ್ದು ಇನ್ನುಳಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಬಂದಿರುವ ದೂರುಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಗಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೈಗೊಂಡಿದ್ದೇವೆ.
ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಸೋಲಿಗರ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸ ವ್ಯವಸ್ಥೆಯನ್ನು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿಗಳು ಬಹುತೇಕ ಮುಗಿಯುವ ಹಂತದಲ್ಲಿದ್ದು ಸಾಮಗ್ರಿಗಳನ್ನು ಸಹ ಒದಗಿಸಲಾಗಿದೆ.
ವೈಲ್ಡ್ ಲೈಫ್ ಕೇಂದ್ರದಿಂದ ಅರಣ್ಯ ಇಲಾಖೆಯ ತಂಡ ಪರಿಶೀಲನೆ ನಡೆಸಿದ್ದಾರೆ. ಇನ್ನು 15 ದಿನಗಳ ಒಳಗೆ ಪರಿಹಾರ ಸಿಗುವ ಭರವಸೆ ಇದೆ. ಇದಕ್ಕೆ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿಗಳನ್ನ ಸಂಪರ್ಕ ಮಾಡಿ ಅವರಿಂದ ಅರಣ್ಯ ಇಲಾಖೆಯ ಮಾಹಿತಿ ನೀಡಿ ಹಾಡುಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಸಂಪರ್ಕದ ಕಾಮಗಾರಿಗಳನ್ನು ಮುಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು.
ಹನೂರು ತಾಲೂಕಿನಲ್ಲಿ ಕುಸುಮ್. ಸಿ ಯೋಜನೆಯಲ್ಲಿ 33 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ರಾಮಪುರ, ಕೌದಳ್ಳಿ, ಅಜ್ಜೀಪುರ ಹನೂರು ಈ ನಾಲ್ಕು ವಿದ್ಯುತ್ ಕೇಂದ್ರಗಳಲ್ಲಿ ಸೌರ ವಿದ್ಯುತ್ ಸರಬರಾಜು ಮಾಡುವುದಕ್ಕೆ. ಹಾಗೂ ಪ್ರತ್ಯೇಕವಾಗಿ ರೈತರ ಪಂಪ್ಸೆಟ್ಟುಗಳಿಗೆ ಕುಸುಮ್. ಬಿ ಯೋಜನೆ ಅಡಿ ಸೋಲಾರ್ ಪಂಪುಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದೇವೆ. ಪರ್ಯಾಯವಾಗಿ ನೈಸರ್ಗಿಕವಾಗಿ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉಪಯೋಗ ಪಡೆದುಕೊಳ್ಳಬಹುದು ಆದಷ್ಟು ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರೈತರು ಸಾರ್ವಜನಿಕರು ಹಾಜರಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮ್ ದುರಸ್ತಿ ಆಗಿರುವ ಬಗ್ಗೆ ದೂರು ನೀಡಿದರು. ಅಲ್ಲದೆ ರೈತರ ಜಮೀನುಗಳಿಗೆ ಕೆಲವು ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಓವರ್ ಲೋಡ್ ಆಗಿ ವಿದ್ಯುತ್ ಸಮಸ್ಯೆಯಾಗುತ್ತಿದೆ. ಹೀಗೆ ವಿದ್ಯುತ್ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಬಸ್ಸುಬಾ ಅಪ್ಪಾನು ಬಾನು, ಬಾನು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ, ಎ.ಇ ಆನಂದ್, ಜೆ.ಇ ವೆಂಕಟೇಶ್ ಮೂರ್ತಿ, ನವೀನ್, ವೆಂಕಟೇಶ್, ಮಹೇಶ್ ಸೇರಿದಂತೆ ರೈತರು ಸಾರ್ವಜನಿಕರು ಹಾಜರಿದ್ದರು.
























