ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.23 ಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬರುವ ರಾಜ್ಯ ಬಜೆಟ್ ನಲ್ಲಿ ಬಿಸಿಯೂಟ ಕಾರ್ಮಿಕರಿಗೆ ವೇತನ

ಹೆಚ್ಚಳ ಸೇರಿದಂತೆ ಇನ್ನಿತರೆ ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಎಐಯುಟಿಯುಸಿ ಮುಖಂಡರಾದ ಎ.ದೇವದಾಸ್, ಡಾ.ಪ್ರಮೋದ್, ಸಂಘದ ಸಲಹೆಗಾರರಾದ ಎಸ್.ಜಿ ನಾಗರತ್ನ, ಬಿಸಿಯೂಟ ಕಾರ್ಮಿಕರ ಮುಖಂಡರಾದ ಅನಸೂಯಮ್ಮ, ರುದ್ರಮ್ಮ, ಶಾಂತಮ್ಮ, ಅಮ್ಮ ಮೇರಿ ಮುಂತಾದವರು ಉಪಸ್ಥಿತರಿದ್ದರು.