ಬಳ್ಳಾರಿ ಮಹಾನಗರ ಪಾಲಿಕೆಗೆ 264 ಕೋಟಿ ರೂಗಳ ವೆಚ್ಚದ ಬಜೆಟ್

oplus_2097152

(ಸಂಜೆವಾಣಿ ಪ್ರತಿನಿಧಿಯಿಂದ )

ಬಳ್ಳಾರಿ: ಇಲ್ಲಿನ ಮಹಾ ನಗರ ಪಾಲಿಕೆಗೆ 2926-27 ನೇ ಸಾಲಿನ ಬಜೆಟ್ ನ್ನು ಮೇಯರ್ ಪಿ.ಗಾದೆಪ್ಪ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯ್ತಿಯ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಕುಬೇರ ಅವರು ಮಂಡಿಸಿದರು.

ಆರಂಭದಲ್ಲಿ ಕುಬೇರ ಅವರು ಒಂದಿಷ್ಟು ಓದಿ ನಂತರ ಪೂರ್ಣವಾಗಿ ಮೇಯರ್ ಗಾದೆಪ್ಪ ಮಂಡಿಸಿದರು.

ಆರಂಭ ಶಿಲ್ಕು 101 ಕೋಟಿ 79 ಲಕ್ಷ ಸೇರಿದಂತೆ 258.36 ಲಕ್ಷ ರೂ ಆದಾಯ ಮತ್ತು 264 ಕೋಟಿ ರೂ ವೆಚ್ಚದ ಹಾಗು 96 ಕೋಟಿ ರೂಗಳ ಉಳಿತಾಯದ ಬಜೆಟ್ ಇದಾಗಿದೆ.

ಯಾವುದಕ್ಕೆ ಎಷ್ಟು ಹಣ ಮೀಸಲು:

ಮಹನೀಯರ ಜಯಂತಿಗೆ 12, ಸರ್ಕಾರಿ ಶಾಲೆಗಳ ಪ್ರತಿಭಾ ಕಾರಂಜಿಗೆ 5, ಮತ್ತು ಕುಡಿಯುವ ನೀರನ ತುರ್ತು ನಿಧಿಗೆ 112, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 100, ಬಳ್ಳಾರಿ ಉತ್ಸವಕ್ಕೆ 200, ಪಾಲಿಕೆಯ ನೌಕರರ ಸಂಘದ ಭವನ ನ೮ರ್ವಹಣೆಗೆ 25, ಬೀದಿ ನಾಯಿಗಳ ಆಶ್ರಯ ತಾಣಕ್ಕೆ 155, ಬಿಡಾಡಿ ದನಗಳ ಸ್ಥಳಾಂತರಕ್ಕೆ 15, ಉದ್ಯಾನವನಗಳ ನಿರ್ಮಾಣ, ಅಭಿವೃದ್ಧಿಗೆ 25, ಡ್ರೋನ್ ಗಳ ಮೂಲಕ ಆಸ್ತಿ ಸರ್ವೇಗೆ 150, ರಸ್ತೆ ಗುಂಡಿ ಮುಚ್ಚಲು 50, ಪೌರ ಕಾರ್ಮಿಕರ ಉಪಹಾರಕ್ಕೆ 150, ಸುರಕ್ಷತಾ ಸಾಧನಗಳಿಗೆ 80, ವಿಶೇಷ ಭತ್ಯೆಗೆ 150, ಪ್ರಕೃತಿ ವಿಕೋಪಗಳ ಪರಿಹಾರಕ್ಕೆ 25, ಮಳೆ ಬಂದಾಗ ಹಾಳಾಗುವ ರಸ್ತೆಗಳ ಅಭಿವೃದ್ಧಿಗೆ 25, ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕಗಳ ನಿರ್ವಹಣೆಗೆ 25, ನೀರಿನ ಶುದ್ದೀಕರಣಕ್ಕೆ 100, ಬೋರ್ ವೆಲ್ ಗಳ ಪುನಶ್ಚೇತನಕ್ಕೆ 28, ಆರ್.ಓ.ಪ್ಲಾಂಟ್ಗಳ ನಿರ್ವಹಣೆಗೆ 20, ನೂತನ ಪೈಪ್ ಲೈನ್ ಅಳವಡಿಕೆಗೆ 50, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುದಾನಕ್ಕೆ 25, ಶೌಚಾಲಯಗಳ ನಿರ್ವಹಣೆಗೆ 50, ಸ್ಮಶಾನಗಳ ಅಭಿವೃದ್ಧಿಗೆ 100, ಗ್ಯಾಸ್ ಚಿತಾಗಾರ ನಿರ್ಮಾಣಕ್ಕೆ 400, ಪುನರ್ವಸತಿ ಕೇಂದ್ರಗಳನಿರ್ವಹಣೆಗೆ 36, ಎಸ್ಸಿ, ಎಸ್ಟಿ ಕಲ್ಯಾಣ, ವಿಕಲಚೇತನರ, ಬಡವರ ಅಭಿವೃದ್ಧಿಗೆ 245, ರಸ್ತೆಗಳ ನಾಮಫಲಕಗಳ ಅಳವಡಿಕೆಗೆ 25 ಲಕ್ಷ ರೂಗಳನ್ನು ಮೀಸಲಿರಿಸಿದೆ.

ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಪಾಲಿಕೆ ಸ್ಪಂದನೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ವೀರಭದ್ರಗೌಡ, ಪದಾಧಿಕಾರಿಗಳು, ಸದಸ್ಯರು ಸೇರಿಕೊಂಡು ಮಾಧ್ಯಮ ಪ್ರತಿನಿಧಿಗಳಿಗೆ ಯೋಗಕ್ಷೇಮ ನಿಧಿ ಸ್ಥಾಪನೆ ಮಾಡಲು ಪಾಲಿಕೆಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಮೇಯರ್ ಗಾದೆಪ್ಪ, ಸದಸ್ಯರು, ಆಯುಕ್ತ ಪಿ.ಎಸ್.ಮಂಜುನಾಥ ಅವರು ಮನವಿಗೆ ಸ್ಪಂದಿಸಿ, ಮೊದಲ ಬಾರಿಗೆ ಪಾಲಿಕೆಯ ವ್ಯಾಪ್ತಿಯ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನೋಂದಾಯಿತ ಮಾಧ್ಯಮ ಪ್ರತಿನಿಧಿಗಳ ಆರೋಗ್ಯದ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸುವುದಕ್ಕೆ 25 ಲಕ್ಷ ರೂಗಳ ಅನುದಾನವನ್ನು 2026-27 ನೇ ಸಾಲಿನ ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ.

ಆದಾಯದ ಮೂಲಗಳು:

ಆಸ್ತಿ ತೆರಿಗೆ :50 ಕೋಟಿ ರೂ

ನೀರಿನ ತೆರಿಗೆ :19.10 ಕೋಟಿ ರೂ

ಯುಜಿಡಿ ತೆರಿಗೆ:3.56 ರ್ಕೊಟಿ ರೂ

ಕಟ್ಟಡಗಳ ನಿಯಂತ್ರಣ ಶುಲ್ಕ: 2.20 ಕೋಟಿ ರೂ

ಘನತ್ಯಾಜ್ ನಿರ್ವಹಣ ಶುಲ್ಕದಿಂದ: 4.20 ಕೋಟಿ ರೂ

ಜಾಹಿರಾತು ತೆರಿಗೆಯಿಂದ 20 ಲಕ್ಷ ರೂ

ವಿವಿಧ ಶೆಸ್ ಗಳಿಂದ: 1.04 ಕೋಟಿ ರೂ

ಆಸ್ತಿ ತೆರಿಗೆ ದಂಡದಿಂದ: 4 ಕೋಟಿ ರೂ

ಉದ್ದಿಮೆ ಪರವಾನಿಗೆ ಶುಲ್ಕದಿಂದ: 1.55 ಕೋಟಿ ರೂ