ಪೆÇೀಲಿಸ್ ಗಸ್ತು ವಾಹನಕ್ಕೆ ಮಂಜುನಾಥ್ ಚಾಲನೆ

ಸಂಜೆವಾಣಿ ವಾರ್ತೆ
ಹನೂರು: ಜ.1:-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೆÇೀಲಿಸ್ ಇಲಾಖೆಯ ಮೂರು ಗಸ್ತು ವಾಹನಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಅವರು ಪೂಜೆ ಸಲ್ಲಿಸಿ ಈಡು ಗಾಯಿ ಒಡೆದು ಹಸಿರು ಬಾವುಟ ಹಾರಿಸುವ ಮೂಲಕ ಪೆÇೀಲಿಸ್ ಗಸ್ತು ವಾಹನಗಳಿಗೆ ಚಾಲನೆ ನೀಡಿದ್ದಾರೆ.

ತಾಲೂಕಿನಲ್ಲಿ ಬರುವಂತಹ ಮೂರು ಪೆÇಲೀಸ್ ಠಾಣೆಗಳಿಗೆ ಹನೂರು, ರಾಮಪುರ, ಮಲೈ ಮಹದೇಶ್ವರ ಬೆಟ್ಟದ ಠಾಣೆಗಳಿಗೆ ಗಸ್ತು ವಾಹನಗಳ ಕೊರತೆಯಿದೆ ಎಂದು ಪೆÇಲೀಸ್ ಇಲಾಖೆಯ ಅಧಿಕಾರಿಗಳು ಶಾಸಕರ ಬಳಿಗೆ ಬಂದು ನಮಗೆ ಗಸ್ತು ಮಾಡಲು ವಾಹನ ಕೊರೆತೆ ಇದೆ ಅದರಿಂದ ಹೆಚ್ಚುವರಿ ವಾಹನವನ್ನು ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆಸಿದ ಶಾಸಕರು ಶಾಸಕರ ಅನುದಾನದಿಂದಲೇ ಪೆÇಲೀಸ್ ಇಲಾಖೆಗೆ ಹೆಚ್ಚುವರಿ ಜೀಪ್ ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ತಕ್ಷಣ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು 25 ಲಕ್ಷ ರೂಗಳನ್ನು ನೀಡಿ ಪೆÇಲೀಸ್ ಇಲಾಖೆಗೆ ಜೀಪ್ ಗಳನ್ನು ವಿತರಣೆ ಮಾಡಿ ಇದರಿಂದ ಇನ್ನು ಹೆಚ್ಚಿನ ರೀತಿಯ ಈ ಜೀಪ್ ಗಳು ಗಸ್ತು ಮಾಡಲು ಉಪಯೋಗವಾಗಲಿದೆ ಎಂದು ತಿಳಿಸದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತ ಕ್ಷೇತ್ರದ ಎಲ್ಲ ಭಾಗಗಳಿಗೆ ಮೂರು ವಾಹನಗಳನ್ನು ನೀಡಿದ ಮೊದಲ ಶಾಸಕರು ನಮ್ಮ ಹನೂರು ವಿಧಾನಸಭಾ ಶಾಸಕರಾಗಿದ್ದು, ಈಗಾಗಲೆ 5 ಜನ ಅಧಿಕಾರಿಗಳಿಗೆ ವಾಹನ ಇರಲಿಲ್ಲ ಸರ್ಕಾರ ಕೊಡುವ ತನಕ ಕಾಯಬೇಕು ಮಾನ್ಯ ಶಾಸಕರು ಕೇಳಿದೊಡನೆ ನೀಡಿದ್ದಾರೆ.

25 ಲಕ್ಷ ನೀಡಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಕಾಲ್ನಡಿಗೆಯಲ್ಲೇ ತೆರಳು ಅವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಈ ಪ್ರದೇಶಕ್ಕೆ ನಾಲ್ಕು ಚಕ್ರದ ವಾಹನ ಬೇಕಾಗಿದ್ದು ಕ್ಷೇತ್ರದ ಜನತೆಗೆ ಪೆÇಲೀಸ್ ಸಹಾಯ ತಲುಪಲು ಎಂದು ಈ ಕೊಡುಗೆಯನ್ನು ನೀಡಿದ್ದು, ಅವರಿಗೆ ಮಾದಪ್ಪ ಆಶೀರ್ವದಿಸಲಿ ಎಂದು ತಿಳಿಸಿದರು.

ಇದೆ ಸಮಯದಲ್ಲಿ ಜಿಲ್ಲಾ ಪೆÇಲೀಸ್ ಆಧೀಕ್ಷಕರಾದ ಕವಿತಾ, ಅಪರ ಜಿಲ್ಲಾ ಪೆÇಲೀಸ್ ಆಧೀಕ್ಷಕರಾದ ಶಶಿಧರ್ ಎಂ.ಎನ್, ಕಾರ್ಯದರ್ಶಿ ರಘು, ಪೆÇಲೀಸ್ ಉಪ ಆಧೀಕ್ಷಕರಾದ ದರ್ಮೆಂದ್ರ,ಪೆÇಲೀಸ್ ಉಪಧೀಕ್ಷರಾದ ಸೋಮಣ್ಣ ಪೆÇಲೀಸ್ ಇನ್ಸ್ಪೆಕ್ಟರಗಳು ಹಾಗೂ ಸಹ ಸಿಬ್ಬಂದಿ ವರ್ಗದವರು ಇದ್ದರು.