ಪಾದಯಾತ್ರಿಗಳಿಗೆ ನೀರು, ಮಜ್ಜಿಗೆ ವಿತರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.03: ಕುರುಗೋಡು ತಾಲೂಕು ಒರ್ವಾಯಿ ಕ್ರಾಸಿನಲ್ಲಿ ಎಮ್ಮಿಗನೂರಿನ ಶ್ರೀ ಜಡೆಸಿದ್ದೇಶ್ವರ ವಿಕಲಚೇತನರ ಸೇವಾ ಸಮಿತಿ ವತಿಯಿಂದ ಕುರುಗೋಡು ದೊಡ್ಡ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರಿಗಳಿಗೆ ಮಜ್ಜಿಗೆ ಮತ್ತು ನೀರಿನ ಪಾಕೆಟ್ ವಿತರಿಸಲಾಯಿತು.

ಪಾದಯಾತ್ರೆ ಕೈಗೊಂಡ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ 12 ರಿಂದ ಬೆಳಗಿನವರೆಗೂ ಕೂಡ ದಾರಿಯಲ್ಲಿ ಬರುವ ಪಾದಯಾತ್ರಿಗಳಿಗೆ ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಊರಿನ ಭಕ್ತರು ಹಾಲು,ಮೊಸರು, ಮಜ್ಜಿಗೆ,ಪ್ರಸಾದ ಸೇವೆಯಂತಹ ಕಾರ್ಯಗಳನ್ನು ಮಾಡುತ್ತಿರುವುದು ಆಧ್ಯಾತ್ಮಿಕತೆಗೆ ಎತ್ತಿ ಹಿಡಿದ ಕೈ ಎಂದರು.

ಈ ವೇಳೆ ಅಧ್ಯಕ್ಷ ಕೆ.ದ್ಯಾವಣ್ಣ ಉಪಾಧ್ಯಕ್ಷ ಎಚ್. ಫಕೀರಪ್ಪ ಪದಾಧಿಕಾರಿಗಳಾದ ರಾಧಾಕೃಷ್ಣ ರಾಜು,ಸಾದಾಪುರ ರಾಮಪ್ಪ, ದೇವರಾಜ್,ಬಾರಿಕರ ವೀರೇಶ್,ಮಲ್ಲಿಕಾರ್ಜುನ,ಶ್ರೀನಿವಾಸ ರೆಡ್ಡಿ, ಶಿಕ್ಷಕ ಶಿವನಗೌಡ ರಾಮಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.