ನಾಟಕವು ವ್ಯಕ್ತಿಯ ಭಾವನೆಗಳಿಗೆ ಜೀವ ತುಂಬುತ್ತದೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.03: ನಾಟಕವು ವ್ಯಕ್ತಿಯ ಭಾವನೆಗಳಿಗೆ ಜೀವ ತುಂಬುತ್ತದೆ. ಇಂತಹ ನಾಟಕಗಳಿಗೆ ಸಹಾಯ ಸಹಾಕಾರ ಅವಶ್ಯಕತೆಯಿದೆ ಎಂದು ವಿ. ಜನಾರ್ದನ, ಸರ್ಕಾರಿ ವಕೀಲರು ಅಭಿಪ್ರಾಯಪಟ್ಟರು.

ನಗರದ ಸಮತಾ ಸಾಹಿತಿ ಟ್ರಸ್ಟ್ (ರಿ) ಬಳ್ಳಾರಿ ಇವರ ವಾರ್ಷಿಕೋತ್ಸವದ ಅಂಗವಾಗಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಾಯೋಜನೆ ಅಡಿಯಲ್ಲಿ  ನೃತ್ಯ ಮತ್ತು ಹಾಸ್ಯ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡುತ್ತಾ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಪ್ರೇಕ್ಷಕರ ಸಹಕಾರ ಬಹುಮುಖ್ಯ  ಉತ್ತಮ ಗುಣಮಟ್ಟದ ನಾಟಕ ಪ್ರದರ್ಶನವಾದರೆ ಖಂಡಿತವಾಗಿ ಪ್ರೇಕ್ಷಕರು ರಂಗ ಮಂದಿರದ ಕಡೆ ಬರುತ್ತಾರೆ ಎಂದರು

ನಮ್ಮ  ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ವಿದ್ಯಾರ್ಥಿಗಳ ಪಾಲು

ಬಹು ದೊಡ್ಡದು ನಾಟಕದಲ್ಲಿ ಅಭಿನಯಿಸುವುದರಿಂದ  ವಿದ್ಯಾರ್ಥಿಗಳ ಕೌಶಲ್ಯ ಬೆಳೆಯುತ್ತದೆ.

45 ವರ್ಷ ಹಿಂದೆ ಸ್ಥಾಪನೆಯಾದ ಈ ಸಂಸ್ಥೆಯು  ಈಗ ಉನ್ನತ ಮಟ್ಟದಲ್ಲಿದೆ ನಾಟಕ ಕಲೆಯನ್ನು ಜೀವಂತವಾಗಿ ಉಳಿಸುವಲ್ಲಿ ಇದರ ಪಾತ್ರ ಸಾಕಸ್ಟಿದೆ ಎಂದು ಸಮತಾ ಸಾಹಿತಿ ಟ್ರಸ್ಟ್ ಅಧ್ಯಕ್ಷರಾದ ಡಾಕ್ಟರ್ ಕೆ.ಸುರೇಂದ್ರ ಬಾಬು ನುಡಿದರು. ವೇದಿಕೆ ಮೇಲೆ ಡಾ. ಗೋಪಾಲಕೃಷ್ಣ, ಬಿ.ಭಾಸ್ಕರ ನಾಯ್ಡು, ಹಳ್ಳಿಮನೆ ದೊಡ್ಡಬಸಪ್ಪ, ಸಿ.ತಿಪ್ಪಯ್ಯ ಶೆಟ್ಟಿ, ಡಿ.ಕೆ. ಪ್ರಸಾದ್ ಇವರುಗಳು ಉಪಸ್ಥಿತರಿದ್ದರು. ನಂತರ ಕು. ಲಕ್ಷ್ಮಿಪ್ರಿಯ, ಕೆ.ರಾದಾಕೃಷ್ಣ, ಕು. ಎಸ್. ಪ್ರಗತಿ ಇವರುಗಳು ನೃತ್ಯ ಪ್ರದರ್ಶಿಸದರು. ಪ್ರಾರಂಭದಲ್ಲಿ ಪ್ರಾರ್ಥನೆ ಶ್ರೀಮತಿ ಎಂ ಪದ್ಮಜ, ನಿರೂಪಣೆ ಟಿ.ನಾಗಭೂಷಣ, ಸ್ವಾಗತ ಟ್ರಸ್ಟ್ ಕಾರ್ಯದರ್ಶಿ ಎಂ ರಾಮಾಂಜಿನೇಯಲು ನಿರ್ವಹಿಸಿದರು. ಶ್ರೀಲಾಲ್ ರೆಡ್ಡಿ ತಂಡದಿಂದ ಬೀಗರೋ-ಬೀಗರೋ ಹಾಸ್ಯ ನಾಟಕ ಅದ್ಭುತವಾಗಿ ಪ್ರದರ್ಶಿಸಿದರು. ಈ ನಾಟಕದಲ್ಲಿ ಎಂ. ರಾಮಾಂಜನೇಯಲು, ಟಿ ನಾಗಭೂಷಣ, ಕೆ.ಸುರೇಂದ್ರ ಬಾಬು, ಲಾಲ್ ರೆಡ್ಡಿ, ನೇತಿ ರಘುರಾಂ, ಜಿ. ಜ್ಯೋತಿ, ಭೀಮನೇನಿ ಪ್ರಸಾದ, ಜಿ.ನಾಗನಗೌಡ, ಜಿ. ವೆಂಕಟೇಶ, ರಮಣಪ್ಪ ಭಜಂತ್ರಿ ಇವರುಗಳು ನಾಟಕದಲ್ಲಿ ಪ್ರದರ್ಶನ ಮಾಡಿದರು ಈ ನಾಟಕಕ್ಕೆ ಸಂಗೀತ ನಿರ್ದೇಶನ ಮುದ್ದ ಟನೂರು ತಿಪ್ಪೆಸ್ವಾಮಿ ನೀಡಿದರು.