
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,23- ಬಾಕಿ ಇರುವ 37 ಸಾವಿರ ಕೋಟಿ ರೂ ಬಿಲ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾ.6 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ.ರಾಜ್ಯದ ಗುತ್ತಿಗೆದಾರರು ಜಲಸಂಪನ್ಮೂಲ ಇಲಾಕೆ ಸೇರಿದಂತೆ ಐದಾರು ಇಲಾಖೆಯ ಕೆಲಸಗಳನ್ನು ಮಾಡಿಕೊಟ್ಟಿದ್ದೇವೆ ಆದರೆ ನಮಗೆ ಗುತ್ತಿಗೆ ಹಣವನ್ನು ಬಿಡುಗಡೆ ಮಾಡದೇ ಹಿಂದಿನ ಸರ್ಕಾರ ಅದು ಇದು ಎಂದು ಸಬೂಬುಗಳನ್ನು ಹೇಳುತ್ತಾ ಮುಂದೂಡುತ್ತಿದೆ. ಪಿಡಬ್ಲ್ಯೂಡಿ ಇಲಾಖೆಯ 8370, ಗ್ರಾಮೀಣಾಭಿಬೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 3800, ಜಲಸಂಪನ್ಮೂಲ ಇಲಾಖೆಯ 13000, ಸಣ್ಣ ನೀರಾವರಿ ಇಲಾಖೆಯ 3000, ನಗರಾಭಿವೃದ್ಧಿ ಇಲಾಖೆಯ 2000 ವಸತಿ 2006, ಕಾರ್ಮಿಕ ಇಲಾಖೆಯ 2000 ಕೋಟಿ ಬಿಬಿಎಂಪಿ 2600 ಕೋಟಿ ಸೇರಿದಂತೆ 37,000 ಕೋಟಿ ರೂ ಬಾಕಿ ಇದ್ಹದು ಈ ಹಣವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 100 ಪುಟಗಳ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಆದರೂ ಸಹ ಸರ್ಕಾರ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಈ ಸರ್ಕಾರ ಎಂಟು ಹತ್ತು ಜಿಲ್ಲೆಗಳನ್ನು ಒಟ್ಟು ಗೂಡಿಸಿ ಪ್ಯಾಕೇಜ್ ಮಾದರಿ ಗುತ್ತಿಗೆ ಕರೆಯುತ್ತಿದೆ. ಅವು ಇತರೆಡ ರಾಜ್ಯದವರ ಪಾಲಾಗುತ್ತಿವೆ. ಅವರ ಬಳಿ ನಾವು ಉಪ ಗುತ್ತಿಗೆ ಮಾಡಬೇಕಾಗಿದೆಂದ ಅವರು ನಮ್ಮಆಸ್ತಿಯನ್ನು ಅಡ ಇಟ್ಟಿದ್ದೇವೆ ನಮ್ಮ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಹೇಗೆ. ಒಂದು ವೇಳೆ ಈಗ ಹಣ ಬಿಡುಗಡೆ ಮಾಡದೇ ಇದ್ದರೆ, ನಮ್ಮ ಸಂಘದಿಂದ ಮಾರ್ಚ್ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಮಾಡುತ್ತೇವೆ ಇಲ್ಲಿ 25-30 ಸಾವಿರ ಜನ ಗುತ್ತಿಗೆದಾರರು ಸೇರಿ ಮುಷ್ಕರ ಮಾಡುತ್ತೇವೆಂದರು.
ಕೆಲಸ ಮಾಡಿ ಬಾಕಿ ಹಣಕ್ಕಾಗಿ 31 ಜಿಲ್ಲೆಗಳ ಗುತ್ತಿಗೆದಾರರು ಕಾಯುವಂತಾಗಿದೆ. ಎಲ್ಲರಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಲು ಮೂರು ಬಾರಿ ಸಮಯಕೇಳಿದರೂ ಸಿಎಂ ಸಿದ್ದರಾಮಯ್ಯ ಅವರು ನಮಗೆ ಸಮಯ ನೀಡಿಲ್ಲ
ಸಚಿವ ಸತೀಶ್ ಜಾರಕಿಹೊಳಿ ಇದ್ದುದರಲ್ಲಿ ಉತ್ತಮ ನಮಗೆ ಸ್ಪಂದನೆ ಮಾಡುತ್ತಾರೆ. ಡಿಕೆ ಶಿವಕುಮಾರ್ ರವರಿಂದ ಯಾವುದೇ ಭರವಸೆಯ ಮಾತು ಬರುತ್ತಿಲ್ಲ
ಹಳೆ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಬಾಕಿ ಹಣ ಹೆಚ್ಚಿಗೆ ಆಗಿದೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿ ಇದ್ದಾರೆ, ದಯಮಾಡಿ ರಾಜ್ಯ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಜಿ.ರಮಣರೆಡ್ಡಿ (ರವಿ)ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಉಮಾಮಹೇಶ್ವರಗೌಡ, ನಾಗಪ್ಪ, ನಾಗರಾಜ್, ರಾಜಶೇಖರ್, ಪ್ರದೀಪ್, ಸಿದ್ದೇಶ್ ಮೊದಲಾದವರು ಇದ್ದರು.





























