
ಸಂಜೆವಾಣಿ ವಾರ್ತೆ
ಹನೂರು: ಫೆ.16:- ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವಿಭಾಗ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ಬೃಹತ್ ಗಾತ್ರದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಸ್ತು ಮಾಡುತ್ತಿರುವಾಗ ಹುಲಿಯು ಮೃತಪಟ್ಟಿರುವುದು ಕಂಡು ಬಂದಿದೆ.
ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ , ಗುಂಡಾಲ್ ಎ ಗಸ್ತಿನ, ಗುಂಡಾಲ್ ಜಲಾಶದ ಒಳಗಡೆ ನೀರಿನಲ್ಲಿ ಬೃಹತ್ ಗಾತ್ರದ ಗಂಡು ಹುಲಿ ಸಾವನಪ್ಪಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಿನಾಂಕ :- 15-02-2025 ರ ಭಾನುವಾರದಂದು ಗಸ್ತು ಮಾಡುತ್ತಿರುವಾಗ ಹುಲಿಯು ಮೃತಪಟ್ಟಿರುವುದು ಕಂಡುಬಂದಿದೆ.
ನಂತರ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು , ಸದರಿ ಹುಲಿಯು ಅಂದಾಜು 5-6 ವರ್ಷ ಪ್ರಾಯದ ಗಂಡು ಹುಲಿಯಾಗಿದ್ದು, ಮೇಲ್ನೋಟಕ್ಕೆ ಉರುಳಿಗೆ ಸಿಲುಕಿ ಗುಂಡಾಲ್ ಡ್ಯಾಮ್ ಹತ್ತಿರ ಬಂದು ನೀರಿನ ದಡದಲ್ಲಿ ಬಂದು ಮೃತಪಟ್ಟಿರುತ್ತದೆ ಎಂದು ತಿಳಿದು ಬಂದಿರುತ್ತದೆ.
ಎನ್.ಟಿ.ಸಿ.ಎ.ಎಸ್, ಓ.ಸಿ.ಪಿ ಯ ಪ್ರಕಾರ ಹುಲಿ ಮೃತಪಟ್ಟಿರುವ ಸ್ಥಳಕ್ಕೆ ಎನ್.ಟಿ.ಸಿ.ಎ ಯ ನಾಮನಿರ್ದೇಶಿತ ಪ್ರತಿನಿಧಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಬೆಂಗಳೂರು ರವರ ನಾಮನಿರ್ದೇಶಿತ ಪ್ರತಿನಿಧಿ, ಸ್ಥಳಿಯ ಪ್ರತಿನಿಧಿಗಳು, ಪಶು ವೈದ್ಯಾಧಿಕಾರಿ ಇವರನ್ನು ಸಮ್ಮುಖದಲ್ಲಿ ಮತ್ತು ಸ್ಥಳಿಯ ಪೆÇೀಲಿಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ವೂಪ್ವೈಸ್. ಪ್ರಮಾಣಿತ ತಾಂತ್ರಿಕ ಮಾರ್ಗದರ್ಶನ ಮತ್ತು ಮೇಲ್ವಿಚಾರಣಾ ಸಮಿತಿ ರವರ ಸಮಕ್ಷಮದಲ್ಲಿ ಹುಲಿಯ ಮರಣೋತ್ತರ ಶವ ಪರೀಕ್ಷೆ ನಡೆಸಿಎನ್.ಟಿ.ಸಿ.ಎ.ಎಸ್, ಓ.ಸಿ.ಪಿ ಯ ಪುಕಾರ ಹುಲಿಯ ಕಳೆಬರವನ್ನು ಸ್ಥಳೀಯ ಶಾಸಕ ಎಂ ಆರ್ ಮಂಜುನಾಥ್ ರವರ ಸಮ್ಮುಖದಲ್ಲಿ ಅಗ್ನಿ ಸ್ಪರ್ಶ ಮಾಡಲಾಯಿತು.
ಇಂತಹ ಬೃಹತ್ ಗಾತ್ರದ ಹುಲಿ ಸಾವನಪ್ಪಿರುವುದು ನಿಜಕ್ಕೂ ನೋವಿನ ಸಂಗತಿ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಉರುಳು ಇಟ್ಟು ಹುಲಿ ಸಾವಿಗೆ ಕಾರಣರಾಗಿರುವವರನ್ನು ಅರಣ್ಯ ಇಲಾಖೆಯ ತನಿಖಾ ತಂಡ ಕಂಡು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವನ್ಯ ಜೀವಿ ಪ್ರಿಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ವೇಳೆಯಲ್ಲಿ ಬಿ ಆರ್ ಟಿ ಡಿ ಸಿ ಎಫ್ ಶ್ರೀ ಪತಿ, ಮಲೈ ಮಹದೇಶ್ವರ ವನ್ಯ ಜೀವಿ ಡಿ ಸಿ ಎಫ್ ಭಾಸ್ಕರ್, ಆರ್ ಎಫ್ ಓ ವಾಸು, ಅರಣ್ಯ ಪಾಲಕರು ಇನ್ನಿತರರಿದ್ದರು.






























