
ಬೆಂಗಳೂರು:ಏ.12:– ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಕೇಂದ್ರ ಸಚಿವರು ಹಾಸನಕ್ಕೆ ತೆರಳುವಾಗ ಬೆಂಗಳೂರು- ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿಕ್ರಂ ಅವರನ್ನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅರ್ಧ ಗಂಟೆಯಿಂದ ಯಾರು ಗಮನಿಸದೆ ರಸ್ತೆಯಲ್ಲಿಯೇ ಇದ್ದಿದ್ದನ್ನು ನೋಡಿ ಪೆÇಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಅಲ್ಲಿನ ವೈದ್ಯರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಸ್ಪಂದಿಸುವಂತೆ ತಿಳಿಸಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವಿಕ್ರಮ್ ನರಳಾಡುತ್ತಿದ್ದರು, ಇದೇ ಮಾರ್ಗವಾಗಿ ತೆರಳುತ್ತಿದ್ದ ಕೇಂದ್ರ ಸಚಿವರು ತಮ್ಮ ಕಾರನ್ನ ನಿಲ್ಲಿಸಿ ಹೆದ್ದಾರಿ ಗಸ್ತು ಅವರಿಗೆ ದೂರವಾಣಿ ಕರೆಮಾಡಿ, ಅವರನ್ನ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಜೊತೆಗೆ ಖುದ್ದು ಸಚಿವರೇ ವೈದ್ಯರಿಗೆ ಕರೆಮಾಡಿ ಸ್ಪಂದಿಸುವಂತೆ ತಿಳಿಸಿದರು. ಸಚಿವರ ಮಾನವೀಯತೆ ಕಾರ್ಯಕ್ಕೆ ಗಾಯಾಳು ಕೃತಜ್ಞತೆ ಅರ್ಪಿಸಿದರು.























