
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.28: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕರ್ನಾಟಕರಾಜ್ಯ ಶಾಖೆ ಮತ್ತು ಬಳ್ಳಾರಿ ಜಿಲ್ಲಾ ಶಾಖೆಯ ವತಿಯಿಂದ ಕಲಬುರಗಿ ವಿಭಾಗ ಮಟ್ಟದ ಯುವ ರೆಡ್‍ಕ್ರಾಸ್ ಮೂರು ದಿನಗಳ ಶಿಬಿರವನ್ನು ರೆಡ್‍ಕ್ರಾಸ್ ಭವನ್, ಬಳ್ಳಾರಿಯಲ್ಲಿ ನಡೆಸಲಾಯಿತು.
ಈ ಶಿಬಿರದಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ಸುಮಾರು 160 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಶೀಬಿರದ ಉದ್ಘಾಟನೆ ಸಮಾರಂಬದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ.ಭಾಸ್ಕರ್ ರಾವ್, ಐ.ಪಿ.ಎಸ್.(ನಿ) ಉಪಾಧ್ಯಕ್ಷರು, ಭರತೀಯರೆಡ್‍ಕ್ರಾಸ್ ಸಂಸ್ಥೆ, ಕರ್ನಾಟಕರಾಜ್ಯ ಶಾಖೆ ಇವರು ಮುಖ್ಯ ಅತಿಥಿಗಳ ಭಾಷಣದಲ್ಲಿ ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲುತರಬೇತಿ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರುಈತರಹದತರಬೇತಿಯನ್ನು ಪಡೆದರೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಜೀವರಕ್ಷಣೆ ಮಾಡಿ ಅನೇಕ ಜನರ ಪ್ರಾಣ ಮತ್ತು ಆಸ್ತಿಯನ್ನು ಉಳಿಸಬಹುದು.ಕಲಬುರಗಿ ವಿಭಾಗದಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಮತ್ತು ವಿವಿಧತರಬೇತಿಯನ್ನು ಪಡೆಯುತ್ತಿರುವುದುತುಂಬ ಸಂತೋಷದ ವಿಷಯವಾಗಿದೆಎಂದು ತಿಳಿಸಿದರು ಮತ್ತು ಈ ಶೀಬಿರದಲ್ಲು ಎಲ್ಲಾರೀತಿಯಿಂದ ಭಾಗವಹಿಸಿ ತಮ್ಮಜಿಲ್ಲೆಯ ಹೆಸರನ್ನುಉನ್ನತ ಮಟ್ಟಕ್ಕೆಏರಿಸಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಡಾ||.ಎಸ್.ಜೆ.ವಿ.ಮಹಪಾಲ್, ಉಪ ಸಭಾಪತಿ ರೆಡ್‍ಕ್ರಾಸ್ ಸಂಸ್ಥೆ, ಇವರು ಮಾತನಾಡುತ್ತಾ, 03 ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರಥಮಚಿಕಿತ್ಸೆ, ಪ್ರಕೃತಿ ವಿಕೋಪದ, ರಕ್ತದಾಣ ಶಿಬಿರ, ಸಾಂಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ ಮತ್ತು ಅನೇಕ ಸ್ಪರ್ದೆಯನ್ನು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡಿದರು.ಇದೇ ಶಿಬಿರದಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಅನೇಕ ಇಲಾಖೆಯಿಂದ ಅತಿಥಿ ಉಪನ್ಯಾಸವನ್ನು ನೀಡಿದರು. ಎಂ.ಎ.ಷಕೀಬ್, ಕಾರ್ಯದರ್ಶಿಗಳು, ರೆಡ್‍ಕ್ರಾಸ್ ಸಂಸ್ಥೆ, ಇವರು ಪ್ರಥಮಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಬಗ್ಗೆ ವಿಷೇಶ ಕಾರ್ಯಗಾರ ನಡೆಸಿದರು.ಡಾ||.ಗಂಗಾಧರ್‍ಗೌಡ, ನಿದೇರ್ಶಕರು, ಬಿಮ್ಸ್ ಮತ್ತು ಸಭಾಪತಿಗಳು ರೆಡ್‍ಕ್ರಾಸ್ ಸಂಸ್ಥೆ, ಪೊಲಾ ರಾಧಾಗೃಷ್ಣ, ಖಜಾಂಚಿ, ಪ್ರೋಫೇಸರ್‍ಕಪ್ಪುಗಲ್ಲು ವಿರೇಶ್, ಈ.ಸಿ ಸದಸ್ಯರು, ರೆಡ್‍ಕ್ರಾಸ್ ಸಂಸ್ಥೆ, ಬಳ್ಳಾರಿ. ಬಿ.ದೇವಣ್ಣ ಮತ್ತುಎಸ್.ಬಿ.ಐ ಮೇನ್ ಬ್ರಾಂಚ್‍ಇವರು ಸಹಕರಿಸಿದರು. ಡಾ||.ಪಲ್ಲವಿ, ಯುವರೆಡ್‍ಕ್ರಾಸ್‍ಕಾರ್ಯಕ್ರಮ ಅಧಿಕಾರಿಗಳು, ಸರಳಾ ದೇವಿ ಕಾಲೇಜು, ಶ್ರೀಮತಿ.ಚಿತ್ರಾ, ಪಿ.ವಾಸು, ಅಶೋಕ್ ಜೇನ್, ಮಹಬೂಬ್ ಬಾಷಾ, ಮಹಾಂತೇಶ್ ಮತ್ತು 07 ಜಿಲ್ಲೆಗಳ ಕಾರ್ಯಕ್ರಮಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




















