Home ಸುದ್ದಿ ಅಂತರಾಷ್ಟ್ರೀಯ ಇರಾನ್ ಇಂಧನ ಘಟಕಗಳ ಮೇಲೆ 10 ದಿನ ದಾಳಿಯಿಲ್ಲ

ಇರಾನ್ ಇಂಧನ ಘಟಕಗಳ ಮೇಲೆ 10 ದಿನ ದಾಳಿಯಿಲ್ಲ

ವಾಷಿಂಗ್ಟನ್,ಮಾ.27- ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‍ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಏ. 6ರವರೆಗೆ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

“ಇರಾನ್ ಸರ್ಕಾರದ ಕೋರಿಕೆಯಂತೆ, ಇಂಧನ ಸ್ಥಾವರ ಮೇಲಿನ ದಾಳಿಯನ್ನು ಏಪ್ರಿಲ್ 6ರ ಸೋಮವಾರದವರೆಗೆ ರಾತ್ರಿ 8 ಗಂಟೆಗೆ ಅನ್ವಯವಾಗುವಂತೆ 10ದಿನ ಮುಂದೂಡಲಾಗಿದೆ, ಅಷ್ಟರೊಳಗೆ ಇರಾನ್ ಶಾಂತಿ ಒಪ್ಪಂದಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಪ್ರಮುಖ ದೇಶಗಳಿಗೆ ಕಚ್ಚಾತೈಲ ಪೂರೈಕೆ ಮಾಡುವ ನಿರ್ಣಾಯಕ ಹಾರ್ಮುಜ್ ಜಲಸಂಧಿ ತೈಲ ಟ್ಯಾಂಕರ್‍ಗಳಿಗೆ ತೆರೆಯಲು 48 ಗಂಟೆಗಳ ಕಾಲಾವಕಾಶ ನೀಡಿದ್ದರು ಇಲ್ಲದಿದ್ದರೆ ವಿದ್ಯುತ್ ಸ್ಥಾವರ ನಾಶಮಾಡುವುದಾಗಿ ಬೆದರಿಕೆ ಹಾಕಿದ್ದರು, ಅದರ ಬೆನ್ನಲ್ಲೇ ಇರಾನ್ ಮೇಲಿನ ಗಡುವನ್ನು ಮತ್ತೆ ಎರಡು ಬಾರಿ ವಿಸ್ತರಿಸಿದ್ದಾರೆ.

ಯುದ್ಧ ನಿಲ್ಲಿಸುವ ಕುರಿತು ನಡೆಸುತ್ತಿರುವ ಮಾತುಕತೆಗಳು ಇರಾನ್ ಜೊತೆ ಉತ್ತಮವಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇರಾನ್ ಮೇಲಿನ ದಾಳಿಯನ್ನು ಏಪ್ರಿಲ್ 6ರ ತನಕ ನಡೆಸುವುದಿಲ್ಲ, ಒಪ್ಪಂದಕ್ಕೆ ಬರದಿದ್ದರೆ ದಾಳಿ ಖಚಿತ ಎಂದು ಗುಡುಗಿದ್ದಾರೆ.

ಅಮೆರಿಕದ ಶಾಂತಿ ಯೋಜನೆಗೆ ಇಸ್ಲಾಮಿಕ್ ಗಣರಾಜ್ಯ ಇರಾನ್ ಪ್ರತಿರೋಧ ವ್ಯಕ್ತಪಡಿಸಿರುವ ನಡುವೆಯೂ ಇರಾನ್ ಜೊತೆ ಮಾತುಕತೆ ಮುಂದುವರಿದಿದೆ. ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಇರಾನ್ ಒಪ್ಪಿಕೊಳ್ಳದಿರುವುದು ಸರಿಯಲ್ಲ ಎಂದಿದ್ದಾರೆ.

ಇರಾನ್ ಜೊತೆ “ಮಾತುಕತೆಗಳು ನಡೆಯುತ್ತಿವೆ , ಆದರೆ ಮಾಧ್ಯಮಗಳು ಬರುತ್ತಿರುವ ನಕಲಿ ಸುದ್ಧಿ, ತಪ್ಪಾದ ವಿವರಣೆಗಳ ಬಗ್ಗೆ ಅವರು ಕಿಡಿಕಾರಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಹಿಂದೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇರಾನ್ ಜೊತೆಗೆ ಅಮೆರಿಕ ಮಾತುಕತೆಗೆ. ಅಮೇರಿಕಾ ಪಾಕಿಸ್ತಾನಿ ಅಧಿಕಾರಿಗಳ ಮೂಲಕ ಟೆಹ್ರಾನ್‍ಗೆ 15 ಅಂಶಗಳ “ಕ್ರಿಯಾ ಪಟ್ಟಿ”ಯನ್ನು ರವಾನಿಸಿದೆ ಎಂದು ಸಾರ್ವಜನಿಕವಾಗಿ ಮೊದಲ ಬಾರಿಗೆ ದೃಢಪಡಿಸಿದ್ದರು

ಅಮೆರಿಕ ಪ್ರಸ್ತಾಪಿಸಿದ 15 ಅಂಶಗಳಿಗೆ ಇರಾನ್‍ನ ಪ್ರತಿಕ್ರಿಯೆಯನ್ನು ನಿನ್ನೆ ರಾತ್ರಿ ಅಧಿಕೃತವಾಗಿ ಮಧ್ಯವರ್ತಿಗಳ ಮೂಲಕ ಕಳುಹಿಸಲಾಗಿದೆ ಮತ್ತು ಇರಾನ್ ಇನ್ನೊಂದು ಬದಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದಿದ್ದಾರೆ.

ಇರಾನ್ ಮೇಲೆ ಮತ್ತು ಈ ಪ್ರದೇಶದ ಬೇರೆಡೆ ಟೆಹ್ರಾನ್ ಬೆಂಬಲಿತ ಗುಂಪುಗಳ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳನ್ನು ಕೊನೆಗೊಳಿಸಲು ಕರೆ ನೀಡಿದೆ.ಯುದ್ಧ ಪರಿಹಾರ ನೀಡಬೇಕು ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‍ನ “ಸಾರ್ವಭೌಮತ್ವ”ವನ್ನು ಗೌರವಿಸಬೇಕು ಎಂದು ಅದು ಹೇಳಿದೆ.