ಯುವಕರಿಗೆ ದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಇದೆ: ಮೋದಿ

ನವದೆಹಲಿ,ಫೆ.೨೨– ದೇಶದ ಯುವಕರು, ನಾವೀನ್ಯಕಾರರು ಮತ್ತು ಉದ್ಯಮಿಗಳು ಭಾರತವನ್ನು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದ್ದಾರೆ”. ಈ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡಿ ಗುರು ಸಾಧಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ


ಪ್ರಪಂಚದಾದ್ಯಂತ ಗೌರವಿಸಲ್ಪಡುವ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳನ್ನು ಭಾರತ ಉತ್ಪಾದಿಸಬೇಕು ನಾವೀನ್ಯತೆ ಮತ್ತು ಶ್ರೇಷ್ಠತೆಯ ಕೇಂದ್ರವಾಗಿ ದೇಶದ ಸ್ಥಾನ ಬಲಪಡಿಸಬೇಕಾಗಿದೆ ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಸಂಶೋಧನೆ, ಸೆಮಿಕಂಡಕ್ಟರ್ ಮತ್ತು ಹಸಿರು ಶಕ್ತಿ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದಿದ್ದಾರೆ.


ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ ೧೩೧ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಅವರು ತಂತ್ರಜ್ಞಾನ, ಸಾಮಾಜಿಕ ಜಾಗೃತಿ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಂಡರು.


ದೆಹಲಿಯಲ್ಲಿ ನಡೆದ ಎಐ ತಂತ್ರಜ್ಞಾನ ಶೃಂಗದಲ್ಲಿ ವಿಶ್ವ ನಾಯಕರಿಗೆ ಹಲವಾರು ವಿಷಯಗಳನ್ನು ತೋರಿಸಿದೆ. ಪ್ರಾಣಿಗಳ ಚಿಕಿತ್ಸೆಯಲ್ಲಿ ಎಐಹೇಗೆ ಸಹಾಯ ಮಾಡುತ್ತಿದೆ ಮತ್ತು ರೈತರು ದಿನದ ೨೪ ಗಂಟೆ ನೆರವಿನ ಸಹಾಯದಿಂದ ಅವರ ಡೈರಿ ಮತ್ತು ಜಾನುವಾರುಗಳನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದು ಎನ್ನುವುದನ್ನು ಪ್ರದರ್ಶಿಸಿದೆ
ಭಾರತೀಯ ತಯಾರಕರು ಮತ್ತು ನವೋದ್ಯಮಗಳು ಶೂನ್ಯ ದೋಷರಹಿತ, ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು ಉತ್ಪಾದಿಸುವ ಅಗತ್ಯವಿದೆ. ಭಾರತ ಜಾಗತಿಕವಾಗಿ ಗೌರವಿಸಲ್ಪಡುವ ಮತ್ತು ಮೌಲ್ಯಯುತವಾದ ಸರಕು ಮತ್ತು ಸೇವೆ ಉತ್ಪಾದಿಸಬೇಕು, ನಾವೀನ್ಯತೆಯ ಕೇಂದ್ರವಾಗಿ ದೇಶದ ಸ್ಥಾನ ಬಲಪಡಿಸಬೇಕು ಎಂದು ಹೇಳಿದ್ದಾರೆ


ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಸಂಶೋಧನೆ, ಅರೆವಾಹಕಗಳು ಮತ್ತು ಹಸಿರು ಶಕ್ತಿಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದ ಅವರು ಯುವಕರು, ನಾವೀನ್ಯಕಾರರು ಮತ್ತು ಉದ್ಯಮಿಗಳು ಭಾರತವನ್ನು ಜಾಗತಿಕ ಮನ್ನಣೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ


ಅಂಗಾಂಗ ದಾನದ ಬಗ್ಗೆ ಜಾಗೃತಿ ಅಗತ್ಯ: ಪಿಎಂ
ಇತ್ತೀಚೆಗೆ ನಿಧನರಾದ ಕೇರಳದ ಯುವತಿಯಾದ ಆಲಿನ್ ಶೆರಿನ್ ಅಬ್ರಹಾಂ ಅವರನ್ನು ನೆನಪಿಸಿಕೊಂಡ ಪ್ರಧಾನಿ, ಅಂಗಾಂಗಗಳನ್ನು ದಾನ ಮಾಡಿ ಇತರರಿಗೆ ಜೀವ ನೀಡಿದ್ದಕ್ಕಾಗಿ ಅವರ ಕುಟುಂಬವನ್ನು ಶ್ಲಾಘಿಸಿದರು.


“ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚುತ್ತಿದೆ ಮತ್ತು ವೈದ್ಯಕೀಯ ಸಂಶೋಧನೆಯೂ ಸಹ ಉತ್ತೇಜನ ಪಡೆಯುತ್ತಿದೆ. ಅಂಗಾಂಗ ದಾನದ ಮೂಲಕ ಯಾರಿಗಾದರೂ ಮತ್ತೊಂದು ಜೀವ ನೀಡಿದ ಆಲಿನ್‌ನಂತಹ ಅನೇಕ ಜನರಿದ್ದಾರೆ” ಎಂದು ಹೇಳಿದರು.


ಪಂಚಪ್ರಾಣದ ನೆನಪು ಮಾಡಿದ ಪಿಎಂ
ಗುಲಾಮಗಿರಿಯ ಮನಸ್ಥಿತಿಯಿಂದ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುವ ಕೆಂಪು ಕೋಟೆಯಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಅವರು ಹಂಚಿಕೊಂಡ ’ಪಂಚ-ಪ್ರಾಣ’ವನ್ನು ನಾಗರಿಕರಿಗೆ ನೆನಪಿಸಿದರು.


ಫೆಬ್ರವರಿ ೨೩ ರಂದು ರಾಷ್ಟ್ರಪತಿ ಭವನದಲ್ಲಿ ಆಚರಿಸಲಾಗುವ ಮುಂಬರುವ ರಾಜಾಜಿ ಉತ್ಸವವನ್ನು ಫೆಬ್ರವರಿ ೨೪ ರಿಂದ ಮಾರ್ಚ್ ೧ ರವರೆಗೆ ಪ್ರದರ್ಶನ ನಡೆಯಲಿದೆ ಎಂದರು

ಜಯಲಲಿತಾ ಜನ್ಮ ವಾರ್ಷಿಕೋತ್ಸವ
ಫೆಬ್ರವರಿ ೨೪ ರಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದರು.


ಸಾರ್ವಜನಿಕ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ನಾಯಕರು ಯಾವಾಗಲೂ ಜನರ ಹೃದಯದಲ್ಲಿ ಉಳಿಯುತ್ತಾರೆ ಎಂದು ಹೇಳಿದ ಅವರು ಜಯಲಲಿತಾ ಜನಪ್ರಿಯ ಮತ್ತು ಗೌರವಾನ್ವಿತ ವ್ಯಕ್ತಿ. ತಮಿಳುನಾಡಿನ ಜನರು ಅವರ ಬಗ್ಗೆ ಆಳವಾದ ಪ್ರೀತಿ ಹೊಂದಿದ್ದರು ಎಂದು ತಿಳಿಸಿದ್ದಾರೆ


ಗುಜರಾತ್‌ನಲ್ಲಿ ನಡೆದ ತಮ್ಮ ಪ್ರಮಾಣವಚನ ಸಮಾರಂಭಗಳಲ್ಲಿ ಅವರ ಉಪಸ್ಥಿತಿ ನೆನಪಿಸಿಕೊಂಡ ಅವರು ಚಿಂತನೆಯ ಸ್ಪಷ್ಟತೆ ಮತ್ತು ಬಲವಾದ ನಾಯಕತ್ವವನ್ನು ಇದೇ ವೇಳೆ ಶ್ಲಾಘಿಸಿದರು


ತಮ್ಮ ಮನ್ ಕಿ ಬಾತ್‌ನ ೧೩೦ ನೇ ಸಂಚಿಕೆಯಲ್ಲಿ, ಭಾರತೀಯ ತಯಾರಕರು ಮತ್ತು ಸ್ಟಾರ್ಟ್‌ಅಪ್‌ಗಳು ತಮ್ಮ ಉತ್ಪನ್ನಗಳಲ್ಲಿ ಶೂನ್ಯ ದೋಷ, ವಿಶ್ವ ದರ್ಜೆಯ ಗುಣಮಟ್ಟವನ್ನು ಗುರಿಯಾಗಿಸಿಕೊಳ್ಳಬೇಕೆಂದು ಪ್ರಧಾನಿ ಒತ್ತಾಯಿಸಿದರು.