
ಔರಾದ್ :ಮಾ.31: ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬೆಳಿಗ್ಗೆ ಬೆಳಗಿನ ಜಾವ ಸುರಿದ ಮಳೆಗೆ ಭಾರಿ ಅವಘಡ ಸಂಭವಿಸಿದೆ. ಬಾದಲಗಾಂವ ಗ್ರಾಮದ ರಾಹುಲ್ ರಮೇಶ ಭಾಸ್ಕರ (25) ಎಂಬ ವ್ಯಕ್ತಿ ಸಿಡಿಲಿಗೆ ಮೃತಪಟ್ಟಿದ್ದಾರೆ.
ರಾಹುಲ ರಮೇಶ ಭಾಸ್ಕರೆ ಅವರು ಮುಂಜಾನೆ ತಮ್ಮ ಜಮೀನಿಗೆ ಹೊದಾಗ ಬೆಳಗಿನ ಜಾವ 5.40 ಗಂಟೆ ಸುಮಾರಿಗೆ ಸಿಡಿಲು ಬಡಿದು ಸ್ಥಳದಲ್ಲೆ ಸಾವನಪ್ಪಿದ್ದಾರೆ.



























