
ಬೆಂಗಳೂರು, ಫೆ. ೧೫- ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ಧರಾಮಯ್ಯ ಅವರು ನಮ್ಮ ಹೈಕಮಾಂಡ್ ಹಾಗಾಗಿ ಹೈಕಮಾಂಡ್‌ಗೆ ನೋಟಿಸ್ ಕೊಡಲು ಸಾಧ್ಯವಿಲ್ಲ. ಹೈಕಮಾಂಡ್ ನಮಗೆ ನೋಟಿಸ್ ಕೊಡಬಹುದು ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವ್ಯಂಗ್ಯವಾಡಿದ್ದಾರೆ.
ಮಂಡ್ಯಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ಧರಾಮಯ್ಯ ನಮ್ಮ ಹೈಕಮಾಂಡ್ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಗಳನ್ನು ನಾನು ಪುನರುಚ್ಛರಿಸುತ್ತೇನೆ.ಯತೀಂದ್ರ ಸಿದ್ಧರಾಮಯ್ಯ ನಮ್ಮ ಹೈಕಮಾಂಡ್ ಎನ್ನುವುದನ್ನು ೧೦೦ ಪರ್ಸೆಂಟ್ ಒಪ್ಪಿಕೊಳ್ಳುತ್ತೇವೆ. ಏಕೆಂದರೆ ಹೈಕಮಾಂಡ್ ಯಾರಿಗೂ ಬಹಿರಂಗವಾಗಿ ಮಾತನಾಡಬೇಡಿ ಎಂದು ಹೇಳಿದ್ದರೂ ಯತೀಂದ್ರ ಸಿದ್ಧರಾಮಯ್ಯ ಮಾತನಾಡುತ್ತಲೇ ಇದ್ದಾರೆ ಹಾಗಾಗಿ ಎಂದು ಕುಟುಕಿದರು.
ಯತೀಂದ್ರ ಸಿದ್ಧಱಾಮಯ್ಯ ಅವರೇ ಪಕ್ಷದಲ್ಲಿ ಸುಪ್ರೀಂ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರಿಗಿಂತ ಜಾಸ್ತಿ, ಡಿ.ಕೆ. ಶಿವಕುಮಾರ್ ಅವರಿಗಿಂದ ಕಡಿಮೆ ಎಂದು ಹೇಳಲಾಗಲ್ಲ. ಹೈಕಮಾಂಡ್ ಮಾತನಾಡಬೇಡಿ ಎಂದು ಹೇಳಿದರೂ ಅವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಯತೀಂದ್ರ ಫವರ್ ಫುಲ್ ಮ್ಯಾನ್ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹಾಗೆಆಗುತ್ತಾರೆ. ಅವರು ಮುಖ್ಯಮಂತ್ರಿ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ.
ಡಿ.ಕೆ. ಶಿವಕುಮಾರ್ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಿಗಿದೆ. ಅವರು ಮುಖ್ಯಮಂತ್ರಿ ಹಾಗೇ ಆಗುತ್ತಾರೆ ಎಂದು ಹೇಳಿದರು.
ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವುದೇ ನನ್ನ ಪ್ರಮುಖ ಕಾರ್ಯಸೂಚಿ ಎಂದಿರುವ ಕೇಂದ್ರ ಸಚಿವಕುಮಾರಸ್ವಾಮಿ ಅವರಿಗೆ ಬೇಸ್ಟ್ ಆಫ್ ಲಕ್ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದ ಶಾಸಕ ರವಿ ಗಣಿಗ, ಕುಮಾರಸ್ವಾಮಿ ಅವರು ಯಾವಾಗಲೂ ಸರ್ಕಾರ ತೆಗೆಯುವುದರಲ್ಲೇ ಇರುತ್ತಾರೆ. ಅವರ ಸರ್ಕಾರವನ್ನೇ ೧೨ ತಿಂಗಳು ತೆಗದುಕೊಂಡು ಬಿಟ್ಟರಲ್ಲ. ಐದುವ ರ್ಷ ಸಿಎಂ ಆಗಿ ಇರಬಹುದಿತ್ತು. ಅವರಿಗೆ ತಮ್ಮದು ಆಡಳಿತ ಪಕ್ಷನಾ, ವಿರೋಧ ಪಕ್ಷನಾ ಎಂಬ ಗೊಂದಲವಿತ್ತು ಹಾಗಾಗಿ ಅವರ ಸರ್ಕಾರವನ್ನು ಬೀಳಿಸಿಕೊಂಡರು.
ಅಧಿಕಾರದಲ್ಲಿದ್ದಾಗ ಅಮೆರಿಕಾಗೆ ಹೋಗಿ ಯಾರಾದರೂ ಕುಳಿತುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಮಂಡ್ಯದಲ್ಲಿ ಎಆರ್‌ಎಐ ಘಟಕ ಸ್ಥಾಪನೆಗೆ ಜಾಗ ಕೊಡಿ ಎಂದು ಕುಮಾರಸ್ವಾಮಿ ಅವರು ಕೇಳಿದ್ದರು ನಾವುಜಾಗ ಕೊಟ್ಟಿದ್ದೇವೆ. ನಮ್ಮಕೆಲಸ ಮುಗಿದಿದೆ. ಕುಮಾರಸ್ವಾಮಿ ಅವರು ಕೈಗಾರಿಕೆ ತರಲಿ ಯಾವಾಗ ಭೂಮಿ ಪೂಜೆ ಮಾಡುತ್ತಾರೋ ನೋಡೋಣ. ಇನ್ನು ಎಷ್ಟು ಪಿಕ್ಚಿರ್ ಬರುತ್ತವೋ ಗೊತ್ತಿಲ್ಲ. ನಾವಂತೂ ಜಾಗದ ಜತೆಗೆ ಮೂಲಸೌಕರ್ಯವನ್ನು ಒದಗಿಸಿಕೊಟ್ಟಿದ್ದೇವೆ. ನಾವು ಅಭಿವೃದ್ಧಿಪರ ಎಂದು ಹೇಳಿದರು.




























