ಯಡ್ರಾಮಿ:ಪಟ್ಟಣ ಪಂಚಾಯತಿಯಿಂದ ಸರಕಾರಿ ಜಾಗದಲ್ಲಿ ಫಾರ್ಮ ನಂ. 3 ವಿತರಣೆ

ಯಡ್ರಾಮಿ,ಆ.17:ಪಟ್ಟಣ ಪಂಚಾಯತಿಯಲ್ಲಿ ಸರಕಾರಿ ಜಾಗದಲ್ಲಿ ಫಾರ್ಮ ನಂಬರ 3 ವಿತರಣೆ ಮಾಡಲಾಗಿದೆ ಹಾಗೂ ಸುಳ್ಳು ಮಾಹಿತಿ ನೀಡಿ ಜನರಿಗೆ ವಂಚನೆ ಮಾಡಲಾಗಿದೆ ಎಂದು ಬಿಸಿಲು ನಾಡಿನ ಹಸಿರು ಸೇನೆ ರಾಜ್ಯ ಅಧ್ಯಕ್ಷ ಶಪೀಉಲ್ಲಾ ದಖನಿ ಆರೋಪಿಸಿದ್ದಾರೆ.
ಯಡ್ರಾಮಿ ಪಟ್ಟಣದಲ್ಲಿ ಸರಕಾರಿ ಜಮೀನಲ್ಲಿ ಫಾರ್ಮ ನಂಬರ್ 3 ನೀಡುವ ಹಾಗೆ ಇರುವುದಿಲ್ಲ ಆದರೆ ಸರಕಾರ ನಿಯಮ ಉಲ್ಲಂಘನೆ ಮಾಡಿ ಫಾರ್ಮ ನೀಡುವ ಮೂಲಕ ನಿಯಮ ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫಾರ್ಮ ಬಗ್ಗೆ ಮಾಹಿತಿ ಕೇಳಿದರೆ ಸುಳ್ಳು ಮಾಹಿತಿ ನೀಡುವ ಮೂಲಕ ಸಾರ್ವಜನಕಾರಿಗೆ ಮೋಸ ಮಾಡುತ್ತಿದ್ದಾರೆ.ಮಾಹಿತಿಯನ್ನು ಕೇಳಿದರೆ ಡಿಸಿಬಿ ನಂಬರ್ ದಿನಾಂಕ ನೀಡುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ.
ಹಣ ಪಡೆದುಕೊಂಡು ಫಾರ್ಮ ನಂಬರ್ 3 ನೀಡಲಾಗುತ್ತಿದ್ದು ತಕ್ಷಣ ಅನಧಿಕೃತ ಜಾಗದಲ್ಲಿ ನೀಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ತನಿಖಾ ತಂಡ ರಚನೆ ಮಾಡಿ ಸಂಪೂರ್ಣ ತನಿಖೆ ಮಾಡಬೇಕು.ತನಿಖೆ ಮಾಡಿ ಮುಖ್ಯಾಧಿಕಾರಿ ಅವರನ್ನು ಅಮಾನತ್ತು ಮಾಡಬೇಕು ಒಂದು ವೇಳೆ ಮಾಡದೇ ಹೋದರೆ ಸಂಪೂರ್ಣ ಯಡ್ರಾಮಿ ಪಟ್ಟಣ ಬಂದ ಮಾಡಿ ಹೋರಾಟ ಮಾಡಲಾಗುವುದು ಎಂದು ಎಂದಿದ್ದಾರೆ.


ಯಡ್ರಾಮಿ ಪಟ್ಟಣದಲ್ಲಿ ಸರಕಾರಿ ಜಮೀನು ಶೇ.75 ಇದ್ದು ಗ್ರಾಮ ಠಾಣ ಶೇ.25 ಇರುತ್ತದೆ.ಆದರೆ ಹಣ ನೀಡಿದವರಿಗೆ ಸರಕಾರಿ ಜಾಗದಲ್ಲಿ ಫಾರ್ಮ ನಂಬರ್ 3 ನೀಡುವ ಮೂಲಕ ಪಟ್ಚಣ ಪಂಚಾಯತಿ ಮುಖ್ಯಾಧಿಕಾರಿ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ ಅವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
_ಶಪೀಉಲ್ಲಾ ದಖನಿ ಬಿಸಿಲು ನಾಡಿನ ಹಸಿರು ಸೇನೆ ರಾಜ್ಯ ಅಧ್ಯಕ್ಷರು ಯಡ್ರಾಮಿ.


ಯಡ್ರಾಮಿ ಪಟ್ಟಣದ ಸರಕಾರಿ ಜಾಗದಲ್ಲಿ ಪಾರ್ಮ ನಂಬರ್ 3 ಬಗ್ಗೆ ಮಾಹಿತಿ ಕೇಳಿದರೆ ದಿನಾಂಕ ನೀಡಿದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದು.ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಅಧಿಕಾರಿಯನ್ನು ಅಮಾನತ್ತು ಮಾಡಿ ಸಾರ್ವಜನಕಾರಿಗೆ ನ್ಯಾಯ ಒದಗಿಸಬೇಕು.
_ಶಾಮ ಪವಾರ ಸಾಮಾಜಿಕ ಹೋರಾಟಗಾರ ಯಡ್ರಾಮಿ