
ರಬಕವಿ-ಬನಹಟ್ಟಿ,ಫೆ.೫: ಮುಂದಿನ ಪೀಳಿಗೆಗೆ ಧರ್ಮದ ಅರಿವು ಮೂಡಿಸುವ ಕುರಿತು ಜೈನ ಧರ್ಮದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುತ್ತಿರುತ್ತವೆ. ಇದರ ಉದ್ದೇಶವೇ ಮುಂದಿನ ಪೀಳಿಗೆಗೂ ಜೈನ ಧರ್ಮದ ಶ್ರೇಷ್ಠತೆ, ಆಚಾರ ವಿಚಾರ ಗೊತ್ತಾಗಲಿ ಎನುವುದೇ ಮೂಲ ಉದ್ದೇಶವಾಗಿದೆ. ಧರ್ಮ ಮರೆತರೆ ಬದುಕಿಲ್ಲ, ಸುಂದರ ಮತ್ತು ಮಹೋನ್ನತ ಬದುಕಿಗೆ ಧರ್ಮವೇ ಮೂಲ ಸೆಲೆಯಾಗಿದೆ. ನಾವು ಧರ್ಮ ಪಾಲಿಸಿದರೆ ನಮ್ಮನ್ನು ಧರ್ಮವೇ ಸಂರಕ್ಷಿಸುತ್ತದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ ೧೦೮ ಕುಲರತ್ನಭೂಷಣ ಮಹಾರಾಜರು ಹೇಳಿದರು.
ತಾಲೂಕಿನ ಭದ್ರಿಗಿರಿ ಬೆಟ್ಟದಲ್ಲಿ ಹಮ್ಮಿಕೊಂಡ ಜಿನ ಸಹಸ್ರಷ್ಟ ನಾಮ ಅರ್ಚನೆ ಆರಾಧನಾ ಮಹೋತ್ಸದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು. ಹಳಿಂಗಳಿ ಭದ್ರಗಿರಿ ಬೆಟ್ಟ ಜೈನರ ಕಾಶಿಯಾಗಿದ್ದು, ಇಲ್ಲಿ ಸಾವಿರಾರು ವರ್ಷಗಳ ಹಿಂದೆ ೭೭೨ ಮುನಿಗಳು ಚಾತುರ್ಮಾಸ ಗೈz Àಪುಣ್ಯ ಭೂಮಿಯಾಗಿದೆ. ಈ ಸ್ಥಳದಲ್ಲಿ ಇಂಥಹ ಪುಣ್ಯ ಕಾರ್ಯಗಳನ್ನು ಮಾಡುವುದು ಮತ್ತು ಭಾಗಿಯಾಗುವುದರಿಂದ ಅಗಣಿತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ೨೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸೇರಿದಂತೆ ಮಹಾರಾಷ್ಟç, ಗೋವಾ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಆಗಮಿಸಿ ಕೃತಾರ್ಥರಾದರು.























