Home ಜಿಲ್ಲೆ ಕಲಬುರಗಿ ಮಹಿಳಾ ದಿನಾಚರಣೆ ಸಮಾನತೆ ಮತ್ತು ಹಕ್ಕುಗಳ ಸಂಕೇತ: ಕಾವ್ಯಶ್ರೀ ಮಹಾಗಾಂವ್ಕರ್

ಮಹಿಳಾ ದಿನಾಚರಣೆ ಸಮಾನತೆ ಮತ್ತು ಹಕ್ಕುಗಳ ಸಂಕೇತ: ಕಾವ್ಯಶ್ರೀ ಮಹಾಗಾಂವ್ಕರ್

ಕಲಬುರಗಿ,ಮಾ.28-ಮಹಿಳಾ ದಿನಾಚರಣೆ ಸಮಾನತೆ ಮತ್ತು ಹಕ್ಕುಗಳ ಸಂಕೇತವಾಗಿದೆ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.
ನಗರದ ಕೆಪಿಇ ಸಂಸ್ಥೆಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,
ಮಹಿಳಾ ದಿನಾಚರಣೆ ಪ್ರತಿವರ್ಷ ಮಾರ್ಚ್ 8ರಂದು ಆಚರಿಸಲಾಗುತ್ತದೆ. ಕ್ರಿ.ಪೂ 6ನೇ ಶತಮಾನದಲ್ಲಿ ಗೌತಮ್ ಬುದ್ಧರು, 12ನೇ ಶತಮಾನದಲ್ಲಿ ಬಸವಣ್ಣನವರು, 19ನೇ ಶತಮಾನದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳೆಯರ ಹಕ್ಕುಗಳಿಗಾಗಿ, ಶಿಕ್ಷಣಕ್ಕಾಗಿ ಪರಿಶ್ರಮಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ಸಂವಿಧಾನಾತ್ಮಕ ಹಕ್ಕು ಮತ್ತು ಕಾನೂನುಗಳನ್ನು ಒದಗಿಸಿಕೊಟ್ಟು ಇಂದು ಮಹಿಳೆ ಎಲ್ಲಾ ರಂಗದಲ್ಲಿ ಪ್ರಗತಿಯನ್ನು ಕಂಡಿದ್ದಾ¼.É ವೃತ್ತಿಪರ ಮಹಿಳೆಯರಿಗೆ ಹೆರಿಗೆ ರಜೆ ಕೊಡುವುದರ ಮೂಲಕ ಸಂವಿಧಾನದಲ್ಲಿ ಹಿಂದೂ ಕೋಡ್ ಬಿಲ್ಲನ್ನು ಪ್ರತಿಪಾದಿಸುವುದರ ಮೂಲಕ ಮಹಿಳೆ ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸಿದ್ದಾಳೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅವರು ಮಾತನಾಡುತ್ತ, ಮಹಿಳೆಯರು ಪುರುಷರಂತೆ ಸಮಾನ ಹಕ್ಕುಗಳನ್ನು ಹೊಂದಬೇಕು. ಉದ್ಯೋಗ, ಶಿಕ್ಷಣ ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳು ಪಡೆದು ಸಬಲಳಾಗಬೇಕು. ಮಹಿಳೆಯರು ಕುಟುಂಬದ ಆಧಾರವಾಗಿದ್ದು, ಸಮಾಜದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಬೇಕು ಎಂದರು.
ವೇದಿಕೆಯ ಮೇಲೆ ಕಾಲೇಜಿನ ಐಕ್ಯೂಎಸಿಯ ಸಂಯೋಜಕರಾದ ಡಾ. ಸಿದ್ದಾರ್ಥ್ ಮದನ್ಕರ್, ಪ್ರಾಂಶುಪಾಲರಾದ ಡಾ. ಸಿದ್ದಪ್ಪಾ ಎಮ್.ಕಾಂತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅರುಣ್ ಜೋಳದ ಕೂಡ್ಲಿಗಿ ,ಡಾ. ಸುದರ್ಶನ್ ಮದನ್ಕರ್, ಗ್ರಂಥ ಪಾಲಕರದ ರಮೇಶ್ ಜಾಬ್ನೂರ್ ಡಾ. ಹರ್ಷವರ್ಧನ್ ಬಿ, ಡಾ. ವಸಂತ ನಾಶಿ, ಡಾ. ದತ್ತುರಾಯ, ಡಾ.ಶಿವಕುಮಾರ್, ಶೃತಿ, ಶಿಲ್ಪಾ, ಮತ್ತು ರತಿ ಗುತ್ತೇದಾರ್ ಇತರರು ಹಾಜರಿದ್ದರು.
ಕಾಲೇಜಿನ ಮಹಿಳಾ ಕೋಶದ ಸಂಚಾಲಕರದ ಡಾ.ನಿರ್ಮಲಾ ಸಿರಗಾಪುರ ಸ್ವಾಗತ ಮತ್ತು ಪ್ರಸ್ತಾವಿಕ ಮಾತನಾಡಿದರು ಡಾ. ಗಾಂಧೀಜಿ ಮೋಳಕೆರೆ ನಿರೂಪಿಸಿದರು. ಡಾ.ಸಿದ್ದಪ್ಪಾ ಎಮ್.ಕಾಂತಾ ವಂದಿಸಿದರು.