Home ಜಿಲ್ಲೆ ಮಹಿಳೆ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿ

ಮಹಿಳೆ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿ


ರಬಕವಿ,ಮಾ.೯: ಮಹಿಳೆ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿ,ಸಹನೆ ಮತ್ತು ಮೌಲ್ಯಗಳ ಪ್ರತೀಕ,ಮನೆ,ಸಮಾಜ ಮತ್ತು ರಾಷ್ಟçದ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿರುವ ಮಹಿಳೆ ಇಂದು ಶಿಕ್ಷಣ,ಉದ್ಯೋಗ,ಆಡಳಿತ, ಕೃಷಿ,ಕಲೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದಾಳೆಂದು ಡಾ. ಅನಂತಮತಿ ಯಂಡೋಳಿ ಹೇಳಿದರು.


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ವಿರಕ್ತ ಮಠದಲ್ಲಿ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘಟನೆ ವತಿಯಿಂದ ಮಹಿಳಾ ವಿಶ್ವ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಮಹಿಳೆಯರು ಶಿಕ್ಷಣ,ಸಂಸ್ಕಾರ, ಸಂಸ್ಕöÈತಿಯನ್ನು ಬೆಳೆಸಿಕೊಂಡು ಮುನ್ನಡೆದಾಗ ಮಾತ್ರ ಸದೃಡ ಸಮಾಜ ನಿರ್ಮಾಣ ಹೊಂದಲು ಸಾಧ್ಯವೆಂದರು,ಸರ್ಕಾರಿ ಜಾರಿಗೆ ತಂದಿರುವ ಪೋಷಣ ಅಭಿಯಾನ,ಸ್ತಿçà ಶಕ್ತಿ ಉದ್ಯೋಗ ಯೋಜನೆಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿವೆ, ಆರ್ಥಿಕವಾಗಿ ಬಲಗೊಳ್ಳಬೇಕು,ಮಹಿಳೆ ಬಲವಾದಾಗ ಕುಟುಂಬ ಬಲವಾಗುತ್ತದೆ,ಕುಟುಂಬ ಬಲವಾದಾಗ ಗ್ರಾಮ ಬಲವಾಗುತ್ತದೆ,ಸಮಾಜದಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು,ತಾಯಿಯಾಗಿ,ಹೆಂಡತಿಯಾಗಿ,ಮಗಳಾಗಿ ಎಲ್ಲ ಸ್ಥಾನವನ್ನು ತುಂಬಿದ್ದಾಳೆ,ಮಹಿಳೆಯು ತ್ಯಾಗ ಜೀವಿಯಾಗಿದ್ದು,ಯಾವ ಕುಟುಂಬದಲ್ಲಿ ಮಹಿಳೆ ಪೂಜಿಸುತ್ತಾಳವೋ ಅಂತಹ ಮನೆಯಲ್ಲಿ ದೇವರು ಸದಾ ನೆಲೆಸಿರುತ್ತಾನೆ,ಆದ್ದರಿಂದ ಮಹಿಳೆಯರನ್ನು ಗೌರವಿಸುವ ಕಾರ್ಯವಾಗಬೇಕು,ಮಹಿಳೆಯರು ಕೂಡಾ ತಮ್ಮ ಆರೋಗ್ಯದತ್ತ ಕಾಳಜಿ ವಹಿಸಿಕೊಂಡು ಸುಂದರ ಕುಟುಂಬ ನಿರ್ಮಾಣ ಮಾಡಬೇಕು ಎಂದು ಹೇಳಿದರು.


ಸಮಾಜದಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದ್ದು,ತಾಯಂದಿರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಸದೃಡ ಸಮಾಜವನ್ನು ನಿರ್ಮಾಣ ಮಾಡಬೇಕು,ಮಕ್ಕಳಲ್ಲಿ ಗಂಡು ಹೆಣ್ಣು ಎಂಬ ಭೇದ ಭಾವ ತೋರದೆ ಎರೆಡು ಮಕ್ಕಳನ್ನು ಸಮಾನವಾಗಿ ಕಾಣಬೇಕು, ತಾಯಂದಿರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹಾಗೂ ಜವಾಬ್ದಾರಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.


ಇದೇ ಸಂದರ್ಭದಲ್ಲಿ ಶ್ರೀ ಅಕ್ಕ ಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಮಹಾನಂದ ಹೊರಟ್ಟಿ ಸದಸ್ಯರಾದ ಶ್ರೀಮತಿ ನಂದತಾಯಿ ಕೊಕಟನೊರ. ಶ್ರೀಮತಿ ಭಾರತಿ ಕೊಪ್ಪದ. ಶ್ರೀಮತಿ ಅರ್ಪಿತಾ ಬದಾಮಿಕ, ಶ್ರೀಮತಿ ವಿಜಯ್ಯಾ ಹತಪಕಿ. ಶ್ರೀಮತಿ ಶಾಂತಾ ತೇಲಿ. ಶ್ರೀಮತಿ ವಿಜಯ್ಯಾ ಜೋತಾವರ. ಶ್ರೀಮತಿ ಶಾಂತ ಕಟ್ಟಿಗಿ. ಶ್ರೀಮತಿ ಶೈಲಜಾ ಹೊರಟ್ಟಿ. ಶ್ರೀಮತಿ ಗೌರವ್ವಾ ಕಟ್ಟಿಗಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.