
ಕಲಬುರಗಿ,ಸೆ.1-ಆಟೋಚಾಲಕನೊಬ್ಬ ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಮಹಿಳೆ ಕೊಲೆ ಮಾಡಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರಾಜನಾಳ ತಾಂಡಾದ ಸೀಮಾ ಸಂತೋಷ ಚವ್ಹಾಣ್ (27) ಕೊಲೆಯಾದ ಮಹಿಳೆ.
ಆಟೋ ಚಾಲಕನಾಗಿರುವ ಫಿರೋಜಾಬಾದ ಗ್ರಾಮದ ಶಾಂತಕುಮಾರ ತಳವಾರ ಜೊತೆಗೆ ಸೀಮಾ ಸಹ ಜೀವನ ನಡೆಸುತ್ತಿದ್ದಳು. ಆಕೆಗೆ 8 ವರ್ಷದ ಮಗಳಿದ್ದಾಳೆ ಎಂದು ತಿಳಿದುಬಂದಿದೆ.
ಯಾವುದೋ ಕಾರಣಕ್ಕೆ ಸೀಮಾ ಮತ್ತು ಶಾಂತಕುಮಾರ ನಡುವೆ ಜಗಳ ನಡೆದಿದ್ದು, ಶಾಂತಕುಮಾರ ಸೀಮಾ ಮೇಲೆ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೀಮಾ ಮೃತಪಟ್ಟಿದ್ದು, ಶಾಂತಕುಮಾರ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.