
ಸೈದಾಪುರ:ಮಾ.೩೧:ಮಹಿಳೆಯರು ಸಮಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಕರಾತ್ಮಕ ಚಿಂತನೆಯೊAದಿಗೆ ಪ್ರಯತ್ನ ಮಾಡಿದಾಗ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಉಪನ್ಯಾಸಕಿ ಶ್ವೇತಾ ರಾಘವೇಂದ್ರ ಪೂರಿ ಅಭಿಪ್ರಾಯಪಟ್ಟರು.
ಪಟ್ಟಣದ ಆರ್ಯ ವೈಶ್ಯ ಮಹಿಳೆಯರಿಂದ ಆಚರಿಸಿದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ತಿçÃಯರಿಂದ ಸಾಂಸ್ಕೃತಿಯ ರಕ್ಷಣೆ ಆಗುತ್ತಿದೆ. ಅವರಲ್ಲಿ ತಾಳ್ಮೇ, ಸಹನೆ, ಲಾಲನೆ ಪಾಲನೆಯಂತಹ ಸ್ವಾಭಾವಿಕ ಗುಣಗಳು ಹೊಂದಿದ್ದೂ ಶಿಕ್ಷಣವಂತರಾಗಬೇಕಾಗಿದೆ. ಅಂದಾಗ ಮಾತ್ರ ಗಟ್ಟಿ ನಿರ್ಧಾರದೊಂದಿಗೆ ಸವಾಲುಗಳನ್ನು ಎದರಿಸಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಗೀತಾ, ರಾಧ, ಸವಿತ, ಸುನಿತ, ವಾಣಿ, ಸುಧಾ, ಲಕ್ಷಿö್ಮÃ, ವಾಸವಿ, ಪಲ್ಲವಿ, ಕವಿತಾ, ಸಂಯುಕ್ತ, ಶ್ವೇತಾ ಬಾದಮಿ, ಪ್ರೀಯ ಸೇರಿದಂತೆ ಇತರರಿದ್ದರು.

























