
ನವದೆಹಲಿ, ಮಾ.೨೮: ಡೋಲಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಮತ್ತು ಬೆಂಜಮಿನ್ ನೆತಾನ್ಯಾಹು ಸರ್ಕಾರಗಳು ಇರಾನ್ ಮೇಲೆ ದಾಳಿ ನಡೆಸಿ ಒಂದು ತಿಂಗಳು ಕಳೆದಿರುವ ವೇಳೆ, ಯುದ್ಧವು ಮಧ್ಯಪ್ರಾಚ್ಯದಲ್ಲಿ ಭಾರೀ ಅಸ್ಥಿರತೆಯನ್ನು ಉಂಟುಮಾಡಿದೆ.
ಸಾವಿರಾರು ಮಂದಿ ಸಾವನ್ನಪ್ಪಿದ್ದು, ಜಾಗತಿಕ ಇಂಧನ ಬೆಲೆಗಳು ಏರಿಕೆಯಾಗಿವೆ. ಇದರ ಪರಿಣಾಮ ಭಾರತಕ್ಕೂ ತೀವ್ರವಾಗಿ ತಟ್ಟಿದೆ.
ಫೆಬ್ರವರಿ ಅಂತ್ಯದ ವೇಳೆಗೆ ಅಮೆರಿಕ-ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ೧,೫೦೦ಕ್ಕೂ ಹೆಚ್ಚು ಗುರಿಗಳನ್ನು ಹೊಡೆದುರುಳಿಸಿದವು. ಈ ದಾಳಿಯಲ್ಲಿ ಇರಾನ್ ಸುಪ್ರೀಂ ನಾಯಕ ಆಲಿ ಖೇಮೆನಿ ಸೇರಿ ಪ್ರಮುಖ ನಾಯಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಆದರೆ, ಅಮೆರಿಕ ನಿರೀಕ್ಷಿಸಿದ್ದಂತೆ ಜನರ ಬಂಡಾಯ ಉಂಟಾಗಲಿಲ್ಲ. ಬದಲಾಗಿ ಇರಾನ್ ತಕ್ಷಣ ಪ್ರತಿದಾಳಿ ಆರಂಭಿಸಿತು.
ಇರಾನ್ ೫೦೦ಕ್ಕೂ ಹೆಚ್ಚು ಕ್ಷಿಪಣಿಗಳು ಹಾಗೂ ೨,೦೦೦ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ಗಲ್ಫ್ ಪ್ರದೇಶದ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿತು. ಯುದ್ಧವು ೧೬ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ.ಇದಕ್ಕೆ ಜೊತೆಗೆ ಲೆಬನಾನ್ ಪ್ರದೇಶದಲ್ಲೂ ಹಿಜ್ಬುಲ್ಲ ಮತ್ತು ಇಸ್ರೇಲ್ ನಡುವೆ ಘರ್ಷಣೆಗಳು ಹೆಚ್ಚಿದ್ದು, ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಮೂರನೇ ವಾರದಿಂದ “ಇಂಧನ ಯುದ್ಧ” ಭಾರೀ ತೀವ್ರತೆಯನ್ನು ಪಡೆದಿದೆ. ಇರಾನ್‌ನ ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರ ಹಾಗೂ ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕಗಳ ಮೇಲೆ ಪರಸ್ಪರ ದಾಳಿಗಳು ನಡೆದವು.ಇದರಿಂದ ಜಾಗತಿಕ ತೈಲ ಬೆಲೆಗಳು ಶೇ. ೪೦ ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಜಾಗತಿಕ ಇಂಧನ ಸರಬರಾಜಿನ ಪ್ರಮುಖ ಮಾರ್ಗವಾದ ಹಾರ್ಮುಜ್ ಸಂಧಿಯನ್ನು ಇರಾನ್ ಬಹುತೇಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.ಜಗತ್ತಿನ ಸುಮಾರು ಶೇ. ೨೦ ತೈಲ ಸಾಗಣೆ ಇದೇ ಮಾರ್ಗದಿಂದ ಭಾರತಕ್ಕೆ ಬರುವ ಕಚ್ಚಾ ತೈಲದ ಸುಮಾರು ಶೇ. ೫೦ ಈ ಮಾರ್ಗದ ಮೂಲಕಕೆಲವು “ಸ್ನೇಹಪರ ರಾಷ್ಟ್ರಗಳಿಗೆ” ಮಾತ್ರ ಪ್ರವೇಶಇತರರಿಗೆ ಭಾರೀ ಶುಲ್ಕ ವಿಧನೆ (ಸುಮಾರು ೨ ಮಿಲಿಯನ್ ಡಾಲರ್)ಈ ಪರಿಸ್ಥಿತಿಯಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ, ಪ್ಯಾನಿಕ್ ಖರೀದಿ ಹಾಗೂ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕ ಇಸ್ರೇಲ್ ಭಿನ್ನಾಭಿಪ್ರಾಯ
ಯುದ್ಧದ ಮಧ್ಯೆ ಟ್ರಂಪ್ ಮತ್ತು ನೆತಾನ್ಯಾಹು ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಾರದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ತಾತ್ಕಾಲಿಕವಾಗಿ ದಾಳಿಯನ್ನು ನಿಲ್ಲಿಸಿ ಏಪ್ರಿಲ್ ೬ರವರೆಗೆ ಮಾತುಕತೆ ಅವಕಾಶ ನೀಡಿದೆ. ಇರಾನ್ ಕೂಡ ಬ್ಯಾಕ್ ಚಾನಲ್ ಮಾತುಕತೆ ನಡೆಸುತ್ತಿದೆ.
ಆದರೆ ಮಾತುಕತೆ ವಿಫಲವಾದರೆ, ಅಮೆರಿಕಾ ಭೂದಾಳಿಗೆ ಮುಂದಾಗುವ ಸಾಧ್ಯತೆ ಇದೆ. ವಿಶೇಷವಾಗಿ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲೆ ದಾಳಿ ಸಾಧ್ಯತೆ ಹೆಚ್ಚಿದೆ.
ಒಂದು ತಿಂಗಳ ನಂತರವೂ ಯುದ್ಧದ ದಿಕ್ಕು ಸ್ಪಷ್ಟವಾಗಿಲ್ಲ. ಇಂಧನ ಸಂಕಷ್ಟ, ಜಾಗತಿಕ ಆರ್ಥಿಕ ಒತ್ತಡ ಮತ್ತು ಭದ್ರತಾ ಆತಂಕಗಳ ನಡುವೆ, ಮುಂದಿನ ಕೆಲವೇ ದಿನಗಳು ಯುದ್ಧದ ಭವಿಷ್ಯವನ್ನು ನಿರ್ಧರಿಸಲಿದೆ.
ಯುದ್ಧಕ್ಕೆ ಯೆಮನ್ ಪ್ರವೇಶ
ಮಧ್ಯ ಪ್ರಾಚ್ಯ ಸಂಘರ್ಷ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಈ ನಡುವೆ ಇರಾನ್, ಇಸ್ರೇಲ್ ಮತ್ತು ಲೆಬನಾನ್‌ನಲ್ಲಿ ಹೊಸ ದಾಳಿ ಮುಂದುವರಿದಿದೆ. ಅಬುಧಾಬಿಯಲ್ಲಿ ಕ್ಷಿಪಣಿ ಪ್ರತಿಬಂಧಕ ಅವಶೇಷಗಳು ಬೆಂಕಿ ನಂದಿಸುವ ವೇಳೆ ೫ ಭಾರತೀಯರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಇರಾನ್ ಜೊತೆ ಸಂಘರ್ಷ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯಾಗಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ, ಇದರಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇರಾನ್‌ನೊಳಗಿನ ಅನೇಕ ಸ್ಥಳಗಳಲ್ಲಿ ಇಸ್ರೇಲ್ ಪ್ರಮುಖ ಮೂಲಸೌಕರ್ಯ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಇರಾನಿನ ಕ್ಷಿಪಣಿಗಳು ಇಸ್ರೇಲ್ ಅನ್ನು ಮಾತ್ರವಲ್ಲದೆ ಯುಎಇಯನ್ನೂ ಗುರಿಯಾಗಿಸಿಕೊಂಡಿವೆ. ಯುಎಇಯಲ್ಲಿ ಕನಿಷ್ಠ ಇಬ್ಬರು ಕ್ಷಿಪಣಿಯ ಅವಶೇಷಗಳಿಂದ ಸಾವನ್ನಪ್ಪಿದ್ದಾರೆ. ಇರಾನ್‌ನ ಐಆರ್‍ಜಿಸಿ ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ಅವರನ್ನು ದಾಳಿಯಲ್ಲಿ ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಲೆಬನಾನ್‌ನಲ್ಲಿಯೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ, ಇರಾನ್‌ನ ನಾಯಕರು ಒಪ್ಪಂದ ಮಾಡಿಕೊಳ್ಳಲು ಬೇಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಗತ್ಯವಿದ್ದರೆ ಅಮೆರಿಕ ಮತ್ತಷ್ಟು ದಾಳಿ ನಡೆಸಲಿದೆ. ಸದ್ಯ ಏಪ್ರಿಲ್ ೬ ರವರೆಗೆ ಇರಾನ್‌ನ ಇಂಧನ ತಾಣಗಳ ಮೇಲಿನ ದಾಳಿ ನಡೆಸುವುದಿಲ್ಲ ಎಂದು ಹೇಳಿದ ಅವರು ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ೧೫ ಅಂಶಗಳ ಶಾಂತಿ ಯೋಜನೆಯನ್ನು ಅಮೆರಿಕ ಮುಂದಿಟ್ಟಿದೆ ಎಂದಿದ್ಧಾರೆ. ಇರಾನ್ ಈ ಪ್ರಸ್ತಾಪವನ್ನು “ಏಕಪಕ್ಷೀಯ ಮತ್ತು ಅನ್ಯಾಯ” ಎಂದು ತಿರಸ್ಕರಿಸಿದೆ.
ಎರಡನೇ ತಿಂಗಳಿಗೆ ಯುದ್ಧ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ಉಡಾಯಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ
ಯೆಮೆನ್‌ನಿಂದ ತನ್ನ ಪ್ರದೇಶದ ಕಡೆಗೆ ಉಡಾಯಿಸಲಾದ ಕ್ಷಿಪಣಿಯನ್ನು ಇಸ್ರೇಲ್ ಸೇನೆ ಪತ್ತೆಹಚ್ಚಿದೆ ಮತ್ತು ಒಳಬರುವ ಬೆದರಿಕೆ ಪ್ರತಿಬಂಧಿಸಲು ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ತೊಡಗಿಸಿಕೊಂಡಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಸಿರಿಯನ್ ರಾಜಧಾನಿ ಡಮಾಸ್ಕಸ್ ಮತ್ತು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದವು,
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಇರಾನ್ ಜೊತೆ ಸಭೆಗಳು “ಈ ವಾರ” ನಡೆಯಬಹುದು ಎಂದು ಹೇಳಿದ್ದಾರೆ.






























